Ad imageAd image

46ನೇ ವಾರ್ಷಿಕೋತ್ಸವ 2026 ರ ಮಾ.ಅಂತ್ಯಕ್ಕೆ 200 ಕೋಟಿ ರೂ. ಗುರಿ : ಸುಧೀಂದ್ರ ಪಂಚಮುಖಿ

Bharath Vaibhav
46ನೇ ವಾರ್ಷಿಕೋತ್ಸವ 2026 ರ ಮಾ.ಅಂತ್ಯಕ್ಕೆ 200 ಕೋಟಿ ರೂ. ಗುರಿ : ಸುಧೀಂದ್ರ ಪಂಚಮುಖಿ
WhatsApp Group Join Now
Telegram Group Join Now

ತುರುವೇಕೆರೆ: ಮುಂಬರುವ ಮಾರ್ಚ್ 2026 ಕ್ಕೆ ತುರುವೇಕೆರೆ ಕರ್ಣಾಟಕ ಬ್ಯಾಂಕ್ ಶಾಖೆಯು 200 ಕೋಟಿರೂಗಳ ವಹಿವಾಟು ನಡೆಸುವ ಗುರಿಯನ್ನು ಹೊಂದಿದೆ ಎಂದು ಕರ್ಣಾಟಕ ಬ್ಯಾಂಕ್ ನ ಡೆಪ್ಯೂಟಿ ರೀಜನಲ್ ಹೆಡ್ ಸುಧೀಂದ್ರ ಪಂಚಮುಖಿ ತಿಳಿಸಿದರು.

ಪಟ್ಟಣದ ದಬ್ಭೇಘಟ್ಟ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆಯ 46ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 46 ವರ್ಷಗಳಿಂದ ತುರುವೇಕೆರೆ ತಾಲ್ಲೂಕಿನ ಜನತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಕರ್ಣಾಟಕ ಬ್ಯಾಂಕ್ ಇದೀಗ 47ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸುಸಂದರ್ಭದಲ್ಲಿ ಬ್ಯಾಂಕ್ ನ ವ್ಯವಹಾರವನ್ನು 200 ಕೋಟಿಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಇದಲ್ಲದೆ ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ನೀಡುವ ಮೂಲಕ ಈವರೆಗೆ ಗ್ರಾಹಕರು ಬ್ಯಾಂಕಿನ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಯನ್ನು ಮತ್ತಷ್ಟು ದೃಢಗೊಳಿಸುವ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಲಿದ್ದೇವೆ ಎಂದರು.

ತುರುವೇಕೆರೆ ಕರ್ಣಾಟಕ ಬ್ಯಾಂಕ್ ಶಾಖೆಯು ಈವರೆಗೆ 186 ಕೋಟಿ ರೂಗಳ ವಹಿವಾಟನ್ನು ಹೊಂದಿದ್ದು, ೪೦ಸಾವಿರಕ್ಕೂ ಅಧಿಕ ಗ್ರಾಹಕರಿಗೆ ನಿರಂತರ ಸೇವೆಯನ್ನು ಒದಗಿಸುತ್ತಿದೆ. ಬ್ಯಾಂಕಿನಲ್ಲಿ ಉಳಿತಾಯ ಖಾತೆ, ಠೇವಣಿ, ಸಾಲ ಸೌಲಭ್ಯಗಳು, ವಿಮಾ ಸೌಲಭ್ಯಗಳು ಸೇರಿದಂತೆ ಹತ್ತಾರು ವಿಶೇಷ ಯೋಜನೆಗಳು ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರೀಕರಿಗೆ ಲಭ್ಯವಿದೆ. ಕನಿಷ್ಟ 200 ರೂಗಳಿಂದ ಲಕ್ಷದವರೆಗಿನ ವಿಮಾ ಸೌಲಭ್ಯಗಳು ಬ್ಯಾಂಕಿನಲ್ಲಿ ದೊರೆಯುತ್ತದೆ ಎಂದ ಅವರು, ಕರ್ಣಾಟಕ ಬ್ಯಾಂಕ್ ಕನ್ನಡಿಗರ ಹೆಮ್ಮೆಯ ಬ್ಯಾಂಕ್ ಆಗಿದೆ. ಕನ್ನಡ ನಾಡಿನ ಸಂಸ್ಕೃತಿಯ ನೆಲೆಟ್ಟಿನ ಹಿನ್ನೆಲೆಯೊಂದಿಗೆ ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಇದು ಮೊಬೈಲ್ ಯುಗವಾಗಿರುವ ಕಾರಣ ಮೊಬೈಲ್ ಮೂಲಕವೂ ಗ್ರಾಹಕರು ಬ್ಯಾಂಕಿಂಗ್ ವ್ಯವಹಾರ ನಡೆಸುವ ಅವಕಾಶವನ್ನು ಬ್ಯಾಂಕ್ ಗ್ರಾಹಕರಿಗೆ ಒದಗಿಸಿದೆ. ನಾಗರೀಕರು ಬ್ಯಾಂಕಿನ ಸೇವೆಯನ್ನು ಪಡೆದುಕೊಳ್ಳಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಕ್ಲಸ್ಟರ್ ಹೆಡ್ ಮುನಿರಾಜ ರೆಡ್ಡಿ, ದೀಪಕ್ ಅಡಿಗ, ಬ್ಯಾಂಕಿನ ವ್ಯವಸ್ಥಾಪಕ ಅಮರೇಶ್, ಎಬಿಎಂ ಶ್ರೀನಿವಾಸ್, ಅಧಿಕಾರಿಗಳಾದ ಶರಿನ್, ನಿಖಿಲ್, ಮೇಘನಾ, ವಿನಾಯಕ ಪಾಟೀಲ್, ಸಂತೋಷ್, ಸಿಬ್ಬಂದಿಗಳಾದ ಶಿವರಾಜ್, ಹರೀಶ್, ಪೂರ್ಣಿಮಾ ಸೇರಿದಂತೆ ತಿಪಟೂರು, ಚಿಕ್ಕನಾಯಕನಹಳ್ಳಿ, ಕೆ.ಬಿ.ಕ್ರಾಸ್ ನೊಣವಿನಕೆರೆ ಪಟ್ಟಣಗಳ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕರು, ನಾಗರೀಕರು ಹಾಗೂ ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!