—————————————-ಭಾರತ ವೈಭವ ನ್ಯೂಸ್ ಪಲಶೃತಿ
ಸೇಡಂ: ತಾಲೂಕಿನ ಸಿಲಾರಕೊಟ್ ಗ್ರಾಮದಲ್ಲಿನ ಕುಡಿಯುವ ನೀರಿನ ಬಾವಿಗಳ ಕುರಿತು ವರದಿ ಮಾಡಿದ ಕೆಲವೇ ಕ್ಷಣಗಳಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಡಾ.ಮಧುಸೂಧನ್ ರೆಡ್ಡಿ ಪಾಟೀಲ್ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಪಂದಿಸಿ ಸ್ವಚ್ಛತೆ ಮಾಡಿಸಿದರು.

ಇನ್ನು ಮುಂದೆ ಕೊಳವೆ ಬಾವಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ಹಾಗೆ ವರದಿ ಮಾಡಿದ ವರದಿಗಾರರಿಗೆ ಧನ್ಯವಾದಗಳು ತಿಳಿಸಿದರು.
ಭಾರತ ವೈಭವ ನ್ಯೂಸ್ ಮತ್ತು ದಿನಪತ್ರಿಕೆಯು ಇದೇ ತರಹ ಇನ್ನೂ ಮುಂದೆ ಕೂಡ ಜನರ ಸಮಸ್ಯೆಗಳ ಕುರಿತು ವರದಿ ಮಾಡಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




