ಚಾಮರಾಜನಗರ :ತಾಲ್ಲೂಕು ಮುರಟಿಪಾಳ್ಯ ಗ್ರಾಮದಲ್ಲಿರುವ ನಮ್ಮ ಆಶ್ರಮಶಾಲೆ ನಮ್ಮ ಹೆಮ್ಮೆ ಕಾನನದಿಂದ ಕನಸಿನೆಡೆಗೆ, ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ವನ್ನು ಮಕ್ಕಳಿಗೆ ಹೂ ಕೊಟ್ಟು ಸಿಹಿ ಹಂಚಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ನಂತರ ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದರಾಜು ಮಾತನಾಡಿ ನಮ್ಮ ಮಕ್ಕಳನ್ನು ಶಾಲೆಗೆ ಹೂ ಕೊಟ್ಟು ಬರಮಾಡಿಕೊಳ್ಳಲಾಯಿತು ಮಕ್ಕಳು ಸಂತೋಷದಿಂದ ಶಾಲೆಗೆ ಬಂದಿದ್ದಾರೆ ನಾವು ನಮ್ಮ ಮಕ್ಕಳಿಗೆ ಪೋಷಕರಿಂದ ಪುಸ್ತಕ ಬಟ್ಟೆ ವಿತರಣೆ ಮಾಡಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಂಜುಂಡಸ್ವಾಮಿ, ಎಂ ಆರ್ ರಂಗಸ್ವಾಮಿ, ಭಾರತ್ ರಾಜ್ ಎಂ, ಅಡಿಗೆ ಸಿಬ್ಬಂದಿಗಳಾದ ನಾಗೇಂದ್ರ, ಉಮೇಶ್, ಶಿವರಾಜ್, ಲತಾ ಹಾಗೂ ಪೋಷಕರು, ಮಕ್ಕಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




