Ad imageAd image

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಮನವಿ

Bharath Vaibhav
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಮನವಿ
WhatsApp Group Join Now
Telegram Group Join Now

ಬಾಗಲಕೋಟ: ಮೊನ್ನೆ ನಡೆದ ಥಗ್ ಲೈಫ್ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೇಳಿಕೆ ನೀಡಿದ ತಮಿಳು ನಟ ಕಮಲ್ ಹಾಸನ್ ವಿರುದ್ಧ ಮನವಿ ಮಾನ್ಯ ಜಿಲ್ಲಾಧಿಕಾರಿಗಳು ಬಾಗಲಕೋಟೆ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆಯಿಂದ ಮಾನ್ಯ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಜಗದೀಶ್ ಕರ್ಪುರ ಮಠ ಮಾತನಾಡಿ ಥಗ್ ಲೈಫ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವುದಲ್ಲದೆ ತಮಿಳ್ ಮಧ್ಯೆ ವಿಷ ಬೀಜ ಬಿತ್ತುವುದರೊಂದಿಗೆ ಅಪಮಾನ ಮಾಡಿರುತ್ತಾರೆ ಪ್ರತಿ ಬಾರಿಯೂ ಹೊಸ ತಮಿಳು ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಮಾಡುತ್ತೆಲ್ಲಿ ಬಂದಿರುತ್ತಾರೆ.

ಈ ರೀತಿ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಾ ಬರುತ್ತಿದ್ದಾರೆ ನಂತರ ಕನ್ನಡಿಗರ ಮತ್ತು ತಮಿಳು ಮಧ್ಯೆ ಶಾಂತಿ ಸುವ್ಯವಸ್ಥೆ ಹದೇಗೆಡುವಂತೆ ಮಾಡಿರುತ್ತಾರೆ ಆದರಿಂದ ಇಂಥ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸುತ್ತೇವೆ ಸ್ವಾಭಿಮಾನಿ ಪಡೆ ಸಂಘಟನೆಯ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಅವರು ಮಾತನಾಡಿ ಕಮಲ್ ಹಾಸನ್ ಅವರು ಕನ್ನಡಿಯರಿಗೆ ಕ್ಷಮೆಯಾಚಿಸಬೇಕು ಸಮಯಾಚಿಸದಿದ್ದರೆ ಇವರು ನಟನೆ ಮಾಡಿದ ಚಲನಚಿತ್ರವನು ಕರ್ನಾಟಕದಲ್ಲಿ ಪ್ರದರ್ಶನ ಗೊಳ್ಳದಂತೆ ತಡೆಹಿಡಿಯಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನವೀನ್ ಕಪಾಲಿ ರಾಜ್ಯ ಉಪಾಧ್ಯಕ್ಷರಾದ ವೇ.ಮೊ ಪರಮಾನಂದಯ್ಯ ಹಿರೇಮಠ್ ರಾಜ್ಯ ಉಪಾಧ್ಯಕ್ಷರಾದ ರಾಘವೇಂದ್ರ ರಾಥೋಡ್ ಸಂಜೀವ್ ಕೋಲ್ಕಾರ್ ಆಸಿಫ್ ಭಗವಾನ್ ಶ್ರೀನಿವಾಸ್ ದಾಸರ್ ವಿಜಯ್ ಡಪಡೆ ರಾಜಪ್ಪ ಕಾಳೆ ರಾಹುಲ್ ಲಮಾಣಿ ಇನ್ನಿತರು ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!