ಗೋಕಾಕ :ನಗರದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆ ಆಗುತ್ತಿರುವ ಬಗ್ಗೆ ಹಲವಾರು ಬಾರಿ ಶಹರ ಪೊಲಿಸ್ ಠಾಣೆಯವರು ಜಾಥಾ ಮೂಲಕ, ಬೈಕ್ ಸವಾರರಿಗೆ ತಿಳಿಸಿದರು ಸಹ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ಬೈಕ್ ಸವಾರರಿಗೆ ಇವತ್ತು ಸಿಪಿಆಯ್ ಸುರೇಶಬಾಬು ಮತ್ತು ಪಿಎಸ್ಐ ಕೆ ವಾಲಿಕರ ಇವರು ಬಿಸಿ ಮುಟ್ಟಿಸಲು ರಸ್ತೆಗಿಳಿದ್ದಿದ್ದರು.
ಶಹರದಲ್ಲಿ ಹೆಚ್ಚುತ್ತಿರುವ ಹೆಲ್ಮೇಟ್ ದರಿಸದೆ ಬೈಕ್ ಸವಾರರಿಗೆ ಇವತ್ತು ದಂಡ ವಿದಿಸಿ ಬಿಸಿ ಮುಟ್ಟಿಸಿದ್ದಾರೆ, ನಗರದ ಎಲ್ಲ ಬೀದಿಗಳಲ್ಲಿ ಪೋಲಿಸರು ಸಂಚರಿಸಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ,ತ್ರಿಬಲ್ ಸವಾರರನ್ನು ತಡೆದು ಸಂಚಾರಿ ನಿಯಮದ ಪ್ರಕಾರ ದಂಡ ವಿಧಿಸಿದರು.

ಅದರ ಜೊತೆಯಲ್ಲಿ ಮುಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಲೈಸೆನ್ಸ್ ರದ್ದುಪಡಿಸಲು ಪ್ರಾದೇಶಿಕ ಉಪಾಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ವರದಿ:ಮನೋಹರ ಮೇಗೇರಿ




