———————————————-ಮೂರನೇ ದಿನಕೆ ಕಾಲಿಟ್ಟ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ
ಯಳಂದೂರು: ಪಟ್ಟಣದ ಪಟ್ಟಣ ಪಂಚಾಯಿತಿಯ ಮುಂಭಾಗ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪೌರ ನೌಕರರು ಅನಿರ್ದಿಷ್ಟವಾದಿ ಮುಷ್ಕರವನ್ನು ನೆಡೆಸಲಾಗುತಿದೆ.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘವು, ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಸಹ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸುತ್ತಲೇ ಬಂದಿದೆ. ಆದರೆ ಇದುವರೆಗೆ ಪೌರಾಡಳಿತ ಸಚಿವರು, ಇಲಾಖೆದ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶಕರು ಸೇರಿದಂತೆ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಸಂಘವು ತನ್ನ ಬೇಡಿಕೆಗಳ ಈಡೇರಿಕೆಗಾಗಿ 27.05.2025 ಮಂಗಳವಾರದಿಂದ ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದು ಇಂದಿಗೆ 3ನೇ ದಿನದ ಮುಷ್ಕರವನ್ನು ನೆಡೆಸುತ್ತಿದ್ದೇವೆ ಎಂದು ಪರಶಿವ ಮೂರ್ತಿ ರವರು ತಿಳಿಸಿದರು.
ಈ ಮುಷ್ಕರದಲ್ಲಿ ಜಯಲಕ್ಷ್ಮಿ, ಮನೋಜ್ ಹೆಚ್ ಐ, ಮಲ್ಲಿಕಾರ್ಜುನ, ರಘು, ನಾಗಮ್ಮ, ಮುರುಗೇಶ್, ಮೂರ್ತಿ, ರೇಖಾ, ಮಾದೇಶ್, ಹಾಗೂ ಪೌರ ನೌಕರರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




