ಶಿಗ್ಗಾಂವಿ : ತಾಲೂಕಿನ ದುಂಡಸಿ ಹೊಸೂರು ಸಮೀಪದಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿಯಾಗಿದ್ದು ಅದರಲ್ಲಿ ಶಾಸಕರ ಹೆಸರು ಮೂಡಿಬಂದಿದೆ.
ಆರೇ ತಿಂಗಳಲ್ಲಿ ನಡೆದ ಅಭಿವೃದ್ಧಿಯನ್ನು ಸಹಿಸಲಾರದೆ ಕೆಲವರೂ ಹೊಟ್ಟೆಕಿಚ್ಚಿನಿಂದ ಈ ಕೆಲಸವನ್ನ ಮಾಡಿದ್ದಾರೆ ಅದರಲ್ಲಿ ಶಾಸಕರ ಹೆಸರನ್ನು ತೆಗೆದುಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸಿದ್ದಾರೆ.

ಶಾಸಕಆಗಿ ಆಯ್ಕೆಯಾದ ಪ್ರಥಮ ಕೆ.ಡಿ.ಪಿ ಸಭೆಯಲ್ಲಿಯೇ ಅಕ್ರಮ ಸರಾಯಿ, ಜೂಜಾಟ, ಮಟಕಾಗೇ ಸಂಪೂರ್ಣ ಕಡಿವಾಣ ಹಾಕಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದ ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ.
ಆದ್ದರಿಂದ ಈ ಜೂಜಾಟಕ್ಕೆ ಅವರಿಗೆ ಏನು ಸಂಬಂಧವಿಲ್ಲವೆಂದು ಅವರ ಕಾರ್ಯಕರ್ತರು ತಿಳಿಸಿದ್ದಾರೆ.
ನ್ಯಾಯವಾದಿ ಮಹಾಂತೇಶ್ ಸಾಲಿ ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಇಸ್ಪೀಟ್ ಆಟ ಆಡುವುದು ಹೊಸದೇನು ಅಲ್ಲ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ಇದೇ ಗಂಗಿಭಾವಿಯಲ್ಲಿ ಸತತವಾಗಿ ರಾಜಾರೋಷವಾಗಿ ಇಸ್ಪೀಟ್ ಆಟ ಆಡಿದ್ದು ಹಾಗೂ ಆಡಿಸಿದ್ದು ಯಾರು ಮರೆಯೋದಿಲ್ಲ ಬಿಜೆಪಿ ಕಾರ್ಯಕರ್ತರು ತಮ್ಮಷ್ಟಕ್ಕೆ ತಾವೇ ಆತ್ಮವಲೋಕನ ಮಾಡಿಕೋಳ್ಳಬೇಕು ಈಗಿನ ಶಾಸಕರು ಯಾಸಿರ್ ಅಹ್ಮದ್ ಖಾನ್ ಪಠಾಣ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಸುಳ್ಳು ಆರೋಪ ಮಾಡುತ್ತಿರುವ ಕೆಲವಂದು ಜನರಿಗೆ ನಿದ್ದಿ ಬರುತ್ತಿಲ್ಲಾ ಆದ ಕಾರಣ ಮೀಡಿಯಾದವರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಶಿಗ್ಗಾವ್ ತಾಲೂಕಿನ ಪಂಚ ಗ್ಯಾರಂಟಿ ಸದಸ್ಯರಾದ ಯುನೋಸ್ ಕಲ್ಯಾಣ ಮಾತನಾಡಿ ಇದರಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ ಶಾಸಕರಾಗಿ ಆಯ್ಕೆಯಾದ ಆರೇ ತಿಂಗಳಲ್ಲಿ ಸಾವಿರ ಕೋಟಿ ಅನುದಾನ ತಂದು ಪ್ರತಿ ಹಳ್ಳಿಗೆ ಭೇಟಿ ಕೊಟ್ಟು ಅಭಿವೃದ್ಧಿ ಕೆಲಸ ಪ್ರಾರಂಭವಾಗಿದ್ದು. ಕೆಲವರಿಗೆ ಸಹಿಸಲಾಗದೆ ಸುಳ್ಳು ಆರೋಪ ಮಾಡುವುದರಲ್ಲಿ ಬಿಜಿ ಯಾಗಿದ್ದಾರೆ.
ನಮ್ಮ ಕ್ಷೇತ್ರದ ಜನರು ಪ್ರಜ್ಞಾವಂತರು ಬುದ್ಧಿವಂತರು ಎಲ್ಲವನ್ನು ತಿಳಿದುಕೊಂಡಿದ್ದಾರೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ನಿಮ್ಮ ಸುಳ್ಳು ಆರೋಪಕ್ಕೆ ಜನರು ಉತ್ತರ ಕೊಟ್ಟಿದ್ದಾರೆ ಮುಂದಿನ ದಿನಮಾನದಲ್ಲಿ ಸಹ ಉತ್ತರ ಕೊಡಲಿಕ್ಕೆ ಕಾತುರದಿಂದ ಕಾಯುತ್ತಿದ್ದಾರೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಪ್ರೋತ್ಸಾಹ ನೀಡಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದರು.
ವರದಿ : ರಮೇಶ್ ತಾಳಿಕೋಟಿ




