ಬೈಲಹೊಂಗಲ: ಟ್ರ್ಯಾಕ್ಟರ್ ಟ್ರೇಲರ್ ಕಳ್ಳರನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ಗೋಕಾಕ್ ತಾಲೂಕಿನ ನೆಲಗಂಟಿ ಗ್ರಾಮದ ಬಸಪ್ಪ ಸತ್ಯಪ್ಪ ತಳವಾರ್ 27, ಅಡಿವಪ್ಪ ಲಕ್ಷ್ಮಣ್ ಸಿಂತಮನಿ 28, ರಾಜು ಶೆಟ್ಟಿಪ್ಪ ನಾಯಕ್ 26, ಸಿದ್ದಪ್ಪ ಶಿವಪ್ಪ ಚಿಕ್ಕೂಪ್ಪದವರ 20, ಪರಪ್ಪ ಬಸಪ್ಪ ಕಡ್ಲಿ 21 ಬಂಧಿತ ಆರೋಪಿಗಳು ಬಂದಿತ ಆರೋಪಿಗಳಿಂದ ಅಂದಾಜು 14 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಟ್ರೈಲರ್ ಒಂದು ಟ್ರ್ಯಾಕ್ಟರ್ ಇಂಜಿನ್ ಒಂದು ರೋಟರ್ ಹಾಗೂ ಗುರುದಾಳ ವಶಪಡಿಸಿಕೊಂಡ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಹಿನ್ನೆಲೆ ಬೈಲಹೊಂಗಲ ತಾಲೂಕಿನ ಹೊಳೆಹೊಸೂರು ನೇಗಿನಾಳ ಗ್ರಾಮದ ಟ್ಯಾಕ್ಟರ್ ಟ್ರೈಲರ್ ಗಳ ಕಳ್ಳುವಾದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಳ್ಳರ ಪತ್ತೆಗೆ ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ್ ಗುಳೇದ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿಗಳಾದ ಶ್ರುತಿ ಕೆ ಆರ್ ಬಿ ಬಸರಗಿ ಡಿವೈಎಸ್ಪಿ ಈರಯ್ಯ ಹಿರೇಮಠ್ ಸಿಪಿಐ ಪ್ರಮೋದ್ ಎಲ್ಲಿಗಾರ್ ಶಿವಾನಂದ್ ಗುಡಿಗೇನಟ್ಟಿ ನೇತೃತ್ವದಲ್ಲಿ ತಂಡ ರಚಿಸಲಾಯಿತು. ಪಿಎಸ್ಐ ಗಳಾದ ಪಿ ಎಸ್ ಮುರನಾಳ ಗುರುರಾಜ್ ಕಲಬುರ್ಗಿ ಈರಪ್ಪ ರಿತ್ತಿ ಪ್ರವೀಣ್ ಕೋಟಿ ಶಂಕರ್ ಮೆಣಸಿನಕಾಯಿ ಜೆ ಆರ್ ಮಳಗಲಿ ಚೇತನ್ ಬುದ್ನಿ ಎಂ ಎಸ್ ದೇಶನೂರ ಶರೀಫ್ ಸಾಬ್ ದಪ್ಪಿದಾರ್ ಕೆಎಫ್ ವಕುಂದ್ ಇ ಎಂ ಚಿಕ್ಕೇರಿ ಎಕೆ ನಂಬರ್ ಸಚಿನ್ ಪಾಟೀಲ್ ವಿನೋದ್ ಠಕ್ಕನ್ನವರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಎಸ್ ಪಿ ಡಾ. ಭೀಮಾಶಂಕರ್ ಗುಳೇದ್ ಸಿಬ್ಬಂದಿಗಳ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ




