ಗೋಕಾಕ : ನಾವು ಅಧಿಕಾರಿಗಳಾದರೂ ಸಹ ಸಂಘದ ಸದಸ್ಯರು ಅದಕ್ಕಾಗಿ ಪೌರನೌಕರರಗೆ ನಾವು ಬೆಂಬಲ ನೀಡುತಿದ್ದೇವೆ,ಅವರ ಬೇಡಿಕೆಗಳನ್ನು ಸರಕಾರ ಈಡೆರಿಸಬೇಕು ಎಂದು ಗೋಕಾಕ ನಗರಸಭೆಯ ಮುಂಬಾಗದಲ್ಲಿ ನಡೆದ ಪೌರನೌಕರರ ಮಾಡುತ್ತಿರುವ ಅನಿರ್ದಿಷ್ಟಾವದಿ ಮುಷ್ಕರದಲ್ಲಿ ನಗರಸಭೆಯ ಅಧಿಕಾರಿ ಗಜಾಕೋಶ ಇವರು ಮಾತನಾಡಿದರು.
ಅದರ ಜೊತೆಯಲ್ಲಿ ರಾಜ್ಯ ಮಟ್ಟದಲ್ಲಿ ಸಂಘಟನೆಗಳಲ್ಲಿ ಬಿನ್ನಾಬಿಪ್ರಾಯ ಇರಬಹುದು ಆದರೆ ನಮಗೆ ನಮ್ಮ ಸಂಘದ ರಾಜ್ಯಾದಕ್ಷರು ಕರೆ ನೀಡಿದ್ದರಿಂದ ಅನಿರ್ದಿಷ್ಟಾವದಿ ಮುಷ್ಕರ ಮಾಡುತಿದ್ದೇವೆ, ಸಾರ್ವಜನಿಕರು ಕೂಡ ಈ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಕೇಳಿಕೊಂಡರು.
ಇನ್ನು ಮುಷ್ಕರದಲ್ಲಿ ಪೌರನೌಕರರು ಹಲಗಿ ಬಾರಿಸುತ್ತ ಸರಕಾರ ನಮ್ಮ ಬೇಡಿಕೆ ಇಡೆರಿಸಬೇಕು,ಅಲ್ಲಿಯವರೆಗೆ ನಮ್ಮ ಮುಷ್ಕರ ಮುಂದೆವರೆಯುತ್ತದೆ ಎಂದರು.
ಇನ್ನು ಸಂಘದ ತಾಲೂಕಾ ಅದ್ಯಕ್ಷ ಜೈಸಿ ತಾಂಬೂಳೆ ಮಾತನಾಡಿ ನಮ್ಮ ಎಲ್ಲ ಬೇಡಿಕೆಗಳನ್ನು ಸರಕಾರ ಈಡೆರಿಸಬೇಕು, ಇನ್ನುಳಿದ ಸರಕಾರಿ ಸಿಗುವ ಎಲ್ಲ ಸೌಲಬ್ಯಗಳು ನಮ್ಮ ಪೌರನೌಕರರಿಗೆ ಸಿಗುವಂತಾಗಬೇಕು, ಅಲ್ಲಿಯವರೆಗೂ ನಮ್ಮ ಮುಷ್ಕರ ಜಾರಿಯಲ್ಲಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಗೋಕಾಕ ನಗರಸಭೆಯ ಅಧಿಕಾರಿಗಳು, ನೀರು ಸರಬರಾಜುವಿನ ನೌಕರರು, ಸೇರಿದಂತೆ ಎಲ್ಲರೂ ಉಪಸ್ಥಿತರಿದ್ದರು.
ವರದಿ: ಮನೋಹರ ಮೇಗೇರಿ




