ವಿಜಯನಗರ : ಜಿಲ್ಲೆ ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸಂಸದ ಈ, ತುಕಾರಾಂ ಮತ್ತು ಕೆ ನೇಮಿರಾಜ ನಾಯ್ಕ್ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಬಿ ರೇಖಾ ರಮೇಶ್, ಉಪಾದ್ಯಕ್ಷರಾದ ಸಿದ್ದಯ್ಯ, ರವರು ಇಂದಿರಾ ಕ್ಯಾಂಟೀನ್ ಟೇಪ್ ಕಟ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.
ನಂತರ ಸಂಸದರು, ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರಸಗೊಬ್ಬರ ರೇಕ್ ಪಾಯಿಂಟ್ ಸ್ಥಳಕ್ಕೆ ಬೇಟಿ ನೀಡಿ ಪರೀಶಿಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದ ತುಕಾರಾಂ ರವರು ಮಾದ್ಯಮರೊಂದಿಗೆ ಮಾತನಾಡಿ ಇಂದಿರಾ ಕ್ಯಾಂಟೀನ್, ನ್ಯಾಷನಲ್ ಹೈವೇ, ನಮ್ಮ ಕ್ಲಿನಿಕ್ ಹಾಗೂ ಆರೋಗ್ಯಕ್ಕೆ,ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತೇನೆ ಎಂದು ತಿಳಿಸಿದರು.
ಆದರೆ ಸುದ್ದಿಗಾರರು ಕೊಟ್ಟೂರಿನ ಸುತ್ತಮುತ್ತಲಿನ ಪ್ರಸ್ತುತ ತೊಂದರೆಗಳ ಬಗ್ಗೆ ಪ್ರಶ್ನೆ ಕೇಳಿದರೆ ಇಲ್ಲಿನ ಕೆಲವು ತೊಂದರೆಗಳಿವೆ, ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೊಡ್ಡ ರಾಮಣ್ಣ, ಎಂ ಎಂ ಜಿ ಸತ್ಯ ಪ್ರಕಾಶ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಐ ದಾರುಕೇಶ್, ಪಟ್ಟಣ ಪಂಚಾಯಿತಿ ಮುಖ್ಯಾದಿಕಾರಿ ಎ,ನಸ್ಸರುಲ್ಲಾ , ಅಡಕಿ ಮಂಜುನಾಥ , ಇಂಜಿನಿಯರ್ ಅಶೋಕ್ , ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬಿ ಮರಿಸ್ವಾಮಿ , ಪಟ್ಟಣ ಪಂಚಾಯಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.
ವರದಿ : ಚಿಗಟೇರಿ ಜಯಪ್ಪ




