ಸಿಂಧನೂರು: ಮೇ 31 ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳ ಖರೀದಿ ವಿಳಂಬ ನೀತಿ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ತಹಸಿಲ್ಧಾರ್ ಕಛೇರಿ ಮುಖ್ಯದ್ವಾರದ ಮುಂದೆ ಭತ್ತ ತುಂಬಿದ ಟ್ರಾಕ್ಟರಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿ ಕಳೆದ ಡಿಸೆಂಬರ್ ನಲ್ಲಿ ನೋಂದಣಿ ಮಾಡಿ ಜನವರಿಯಲ್ಲಿ ಜೋಳ ಖರೀದಿ ಮಾಡಬೇಕಾಗಿತ್ತು ಆದರೆ ಸರ್ಕಾರ ಫೆಬ್ರುವಲ್ಲಿ ನೊಂದಾಣೆ ಮೇ ನಲ್ಲಿ ತಡವಾಗಿ ಖರೀದಿ ಪ್ರಕ್ರಿಯೆ ಆರಂಭಿಸಿದೆ ಈಗ ಜೋಳದಲ್ಲಿ ಹುಳುಗಳು ಇವೆ ಎಂದು ಕೊಂಡುಕೊಳ್ಳಲು ಕೇಂದ್ರ ಉಗ್ರಾಣ ಅಧಿಕಾರಿಗಳು ನಿರಾಕರಿಸುತ್ತಿರುವುದು ಖಂಡನೆಯ ಎಂದು ರೈತರು ಹಗಲು-ರಾತ್ರಿಯೆಂಬುದೇ ಎರಡು ದಿನಗಳಿಂದ ನಿರಂತರ ಪ್ರತಿಭಟನೆಗೆ ಇಳಿದಿದ್ದಾರೆ ಪೊಲೀಸರು ತಿಳಿಗೊಳಿಸಲು ಪ್ರಯತ್ನಿಸಿದರು ಡಿ ಸಿ ಬಂದು ರೈತರ ಸಮಸ್ಯೆ ಬಗೆಹರಿಸುವವರಿಗೆ ಈ ಹೋರಾಟ ಮುಂದುವರಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ. ಉಪಾಧ್ಯಕ್ಷ ಬಸವರಾಜ ಗೋಡಿಹಾಳ. ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಹಂಚಿನಾಳ. ಬಸವಂತರಾಯ ಗೌಡ ಕಲ್ಲೂರು. ನಿರುಪಾದಿ ಗೋಮರ್ಶಿ ಮುಖಂಡರಾದ ಮಾಜಿ ಸಂಸದ ಕೆ ವಿರುಪಾಕ್ಷಪ್ಪ. ಹನುಮನ ಗೌಡ ಬೆಳಗುರ್ಕಿ. ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ ಇದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ




