ಬೆಂಗಳೂರು : ಡಿಸಿಗಳು ಡೈರಿ ಬರೆಯಬೇಕು ಆಡೇರಿಗಳು ಸಿಎಸ್‌ಸಿಗೆ ತಲುಪಬೇಕು ಎಂದು ಡಿಸಿ ಮತ್ತು ಸಿಇಒಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುರಿಗಾಹಿಗಳ ಅರಣ್ಯ ಸಿಬ್ಬಂದಿ ಕೊಡುತ್ತಿರುವ ಕಿರುಕುಳ ನಿಲ್ಲಬೇಕು. ಯುವನಿಧಿ ಫಲಾನುಭವಿಗಳಿಗೆ ಉದ್ಯೋಗಕ್ಕಾಗಿ ತರಬೇತಿ ಸಿಗಬೇಕು. ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ತರಬೇತಿ ನೀಡಿ ಉದ್ಯೋಗ ಸಿಗಬೇಕು. ತರಬೇತಿ ಪಡೆದವರೆಲ್ಲರಿಗೂ ಉದ್ಯೋಗ ಸಿಗದೇ ಹೋಗಬಹುದು ತರಬೇತಿಯನ್ನು ಯುವನಿಧಿ ಫಲಾನುಭವಿಗಳಿಗೆ ನೀಡಬೇಕು ಎಂದು ತಿಳಿಸಿದರು.
ಡಿಸಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಆ ಡೈರಿಯಲ್ಲಿ ಫೀಲ್ಡ್ ವರ್ಕ್ಅನುಭವಗಳು, ಸಮಸ್ಯೆಗಳು, ಪರಿಹಾರ ಎಲ್ಲದರ ಬಗ್ಗೆಯೂ ಉಲ್ಲೇಖ ಮಾಡಬೇಕು. ಡೈರಿ ಬರೆಯಲು ಎಲ್ಲಾ ಕೆಡಿಪಿ ಸಭೆಗಳಲ್ಲಿ ನಾನು ಸೂಚನೆ ನೀಡಿದೆ. ಇನ್ನೂ ಕೆಲವರು ಸಮರ್ಪಕವಾಗಿ ಡೈರಿ ಬರೆದಿಲ್ಲ ಎನ್ನುವ ಮಾಹಿತಿ ಇದೆ. ನೀವು ಬರೆದ ಡೈರಿಗಳು ಸಿಎಸ್‌ಗೆ ತಲುಪಿಸಿದರೆ ನಾನು ಗಮನಿಸಬಹುದು ಎಂದು ತಿಳಿಸಿದರು.




