ಧಾರವಾಡ: ಜಿಲ್ಲೆ, ಕಲಘಟಗಿ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀಮತಿ ಶಾರದಾ (ಲತಾ) ಎಂ ನಾಗನಗೌಡ ಅವರು ಇಂದು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಇಂದು ಮಿಶ್ರೀಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಸಭಾಭವನದಲ್ಲಿ ಸೇವಾ ನಿವೃತ್ತಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀ ಡಾ ಎಸ್ ಎಂ ಹೊನ್ನಕೇರಿ. ಹಾಗೂ ಜಿಲ್ಲಾ ತಾಯ ಮಕ್ಕಳ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಸುಜಾತ ವಿ ಎಚ್. ಹಾಗೂ ತಾಲೂಕ ವೈದ್ಯಾಧಿಕಾರಿಗಳಾದ ಡಾ ಏನ್ ಬಿ ಕರ್ಲವಾಡ್ . ಶಸ್ತ್ರಚಿಕಿಸ್ತ ವೈದ್ಯರಾದ ಡಾ ಬಸವರಾಜ ಬಾಸೂರ. ಪ್ರಾಥಮಿಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ ಸುಧಾಕರ್ ಚವಾಣ್ . ಡಾ ಎಂ ಕುಂದಗೋಳ. ಡಾ ರವಿ ಸೋಮಣ್ಣವರ್. ಡಾ ಗಿರಿಜಾ ರವಿ ಸೋಮಣ್ಣವರ್. ಡಾ ಮಾಂತೇಶ್ ಕುಲಕರ್ಣಿ. ಡಾ ಗಿರಿಜಾದೇವಿ. ಹಾಗೂ ಪ್ರಾಥಮಿಕ ಆರೋಗ್ಯ ಇಲಾಖೆ, ಮಿಸ್ತ್ರಿಕೋಟಿ ಹಾಗೂ ಕಲಘಟಗಿ ಎಲ್ಲ ಆಶಾ ಕಾರ್ಯಕರ್ತೆಯರು ಸರ್ವ ಆರೋಗ್ಯ ಇಲಾಖೆ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ನಿತೀಶಗೌಡ ತಡಸ ಪಾಟೀಲ್




