———————————————–ಐಪಿಎಲ್- ಎರಡನೇ ಕ್ವಾಲಿಪಾಯರ್ ಇಂದು
ಅಹ್ಮದಾಬಾದ್: ಐಪಿಎಲ್ ಟ್ವೆಂಟಿ- 20 ಕ್ರಿಕೆಟ್ ಪಂದ್ಯಾವಳಿಯ ಕ್ವಾಲಿಪಾಯರ್-2 ಪಂದ್ಯ ಇಂದು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದ್ದು, ಗೆದ್ದ ತಂಡ ಎರಡನೇ ತಂಡವಾಗಿ ಫೈನಲ್ ಪ್ರವೇಶ ಮಾಡಲಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎರಡನೇ ಕ್ವಾಲಿಪಾಯರ್ ಪಂದ್ಯ ಸಾಯಂಕಾಲ 7:30 ಕ್ಕೆ ನಡೆಯಲಿದ್ದು, ಉಭಯ ತಂಡಗಳು ಸತಾಯ- ಗತಾಯ ಪಂದ್ಯ ಗೆದ್ದು ಫೈನಲ್ ತಲುಪಲು ಯತ್ನ ಮಾಡಲಿವೆ. ಪಂಜಾಬ್ ಕಿಂಗ್ಸ್ ತಂಡ ಅಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಹೊಂದಿದ್ದರೂ ಮೊದಲ ಕ್ವಾಲಿಪಾಯರ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದರಿಂದ ಈಗ ಫೈನಲ್ ತಲುಪಲು ಎರಡನೇ ಕ್ವಾಲಿಪಾಯರ್ ನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯದಲ್ಲಿದೆ.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಪಂದ್ಯದಿಂದ ಪಂದ್ಯಕ್ಕೆ ತನ್ನ ಪ್ರದರ್ಶನದಲ್ಲಿ ಕ್ಷಿಪ್ರ ಸುಧಾರಣೆ ತಂದುಕೊಂಡಿದೆ. ಅಲ್ಲದೇ ಇಂಗ್ಲೆಂಡಿನ ಬಿರುಸಿನ ಆಟಗಾರ ಬ್ರಿಸ್ಟೋವ್ ತಂಡಕ್ಕೆ ಸೇರ್ಪಡೆಯಾಗಿ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ ತಂದಂತಾಗಿದೆ.




