ಸೇಡಂ: ತಾಲೂಕಿನ ಇಮಾಡಪೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಿಂದುಗಡೆ ಜಿಲ್ಲಾ ಪಂಚಾಯತ್ ಇಲಾಖೆ ವತಿಯಿಂದ ಸಿಸಿ ರಸ್ತೆ ಕಾಮಗಾರಿ ಮಾಡಲಾಗಿದ್ದು ಸ್ವಲ್ಪ ಮಳೆಗೆ ಮೊಳಕಾಲು ಉದ್ದಕ್ಕೂ ಸಿಸಿ ರಸ್ತೆ ಮೇಲೆ ನೀರು ನಿಂತಿದ್ದು ಈ ಸಿಸಿ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿ ಆಗಿದ್ದು ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ವತಿಯಿಂದ ಜಿಲ್ಲಾ ಪಂಚಾಯಿತ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ರವರಿಗೆ ಮನವಿ ಸಲ್ಲಿಸಿದರು.
ಸಿಸಿ ರಸ್ತೆಗೆ ಬೇಕಾಗಿರುವಂತಹ ಕಾಂಕ್ರೀಟ್ ಸಿಮೆಂಟ್, ಮರಳು, ಸರಿಯಾಗಿ ಉಪಯೋಗಿಸದೆ ಇರುವುದರಿಂದ ಮನಸ್ಸಿಗೆ ಬಂದಂತೆ ಸಿಸಿ ರಸ್ತೆ ಮಾಡಿ ಕೈ ತೊಳೆದುಕೊಂಡಿದ್ದಾರೆ ಈ ಕಾಮಗಾರಿ ಕುರಿತು ಈಗಾಗಲೇ ಅಧಿಕಾರಿಗಳಿಗೆ ಗುತ್ತಿಗೆದಾರನಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಿ ಎಂದು ಸಂಬಂಧಪಟ್ಟ ಜ್ಯೂನಿಯರ್ ಇಂಜಿನಿಯರ್ ಅವರಿಗೆ ಹೇಳಿದರು ಯಾವುದೇ ರೀತಿ ಸ್ಪಂದನೆ ನೀಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಅಧ್ಯಕ್ಷರಾದ ರವಿಸಿಂಗ್ ರಜಪೂತ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುಂಡಪ್ಪ ಪೂಜಾರಿ, ಸುಭಾಷ್, ನರೇಂದ್ರ ಸಿಂಗ್, ಸದಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




