ಯಳಂದೂರು : ಪಟ್ಟಣದಲ್ಲಿರುವ ಎಸ್ ಡಿ ವಿ ಎಸ್ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಂದ ಜೂನ್ 3ರ ಮಂಗಳವಾರ ವಿಶ್ವ ಸೈಕಲ್ ದಿನವನ್ನು ಆಚರಣೆ ಮಾಡಲಾಯಿತು ಶಾಲೆಯ ಮಕ್ಕಳು ಸೈಕಲ್ ಜಾಥಾದ ಮೂಲಕ ಯಳಂದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಬಳಸಿ ಅರೋಗ್ಯ ಉಳಿಸಿ, ಸೈಕಲ್ ಬಳಸಿ ಇಂಧನ ಉಳಿಸಿ ಎಂದು ಅರಿವು ಮೂಡಿಸಿದರು
ಶಿಕ್ಷಕರಾದ ಗುಂಬಳ್ಳಿ ಬಸವರಾಜು ಮಾತನಾಡಿ ಸೈಕಲ್ ಬಳಸಿ ಅರೋಗ್ಯ ಉಳಿಸಿ, ನಾವು ಸೈಕಲ್ ಬಳಸುವುದರಿಂದ ಮೂಳೆಗಳು, ರಕ್ತಚಲನೆ ಹಾಗೂ ಅರೋಗ್ಯಕರವಾದ ಲಾಭಗಳನ್ನು ದಿನನಿತ್ಯ ಸೈಕಲ್ ಬಳಸುವುದರಿಂದ ಪಡೆದು ಕೊಳ್ಳಬಹುದು, ಮಕ್ಕಳು ಹಾಗೂ ದೊಡ್ಡವರು ಸೈಕಲ್ ಬಳಸಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಮಕ್ಕಳು, ಜಾಥಾದಲ್ಲಿ ಭಾಗವಹಿಸಿದರು.
ವರದಿ : ಸ್ವಾಮಿ ಬಳೇಪೇಟೆ




