ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಕಂಪನಿ ಕಾರ್ಮಿಕ ಚುನಾವಣೆ ದಿನಾಂಕ ನಿಗದಿಯಾಗಿದ್ದು ಈಗಾಗಲೇ ಎ ಐ ಟಿ ಯು ಸಿ ಪಕ್ಷದಲ್ಲಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರ ಸಂಘದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ಇವರು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎ ಐ ಟಿ ಯು ಸಿ ಪಕ್ಷದ ಅಲ್ಲಿರುವ ಮುಖಂಡರ ವರ್ತನೆಯಿಂದ ಬೇಸತ್ತು ಹಾಗೂ ಅವರ ಹಿತೈಷಿಗಳನ್ನು ಪಕ್ಷದಿಂದ ದೂರ ಇಟ್ಟಿರುವ ಕಾರಣ ಎ ಐ ಟಿ ಯು ಸಿ ಪಕ್ಷಕ್ಕೆ ಬಾಯ್ ಎಂದು ಸಿ ಐ ಟಿ ಯು ಪಕ್ಷಕ್ಕೆ ಜೈ ಎಂದ ಎಸ್ ಎಂ ಶಫೀ ಅಂಡ್ ಟೀಮ್ ಈಗಾಗಲೇ ಸಿ ಐ ಟಿ ಯು ಪಕ್ಷದ ಮುಖದ ರೊಂದಿಗೆ ಮಾತುಕತೆ ನಡೆಸಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರ ಚುನಾವಣೆಯಲ್ಲಿ ನಮ್ಮನ್ನು ಪಕ್ಷಕೆ ಸೇರ್ಪಡೆ ಮಾಡಿಕೊಂಡರೆ ನಾವು ಸಿ ಐ ಟಿ ಯು ಪಕ್ಷದ ಸಿದ್ಧಾಂತಗಳಿಗೆ ಒಪ್ಪಿ ಚಿನ್ನದ ಗಣಿ ಕಾರ್ಮಿಕರ ಚುನಾವಣೆ ನಾವು ನೀವು ಒಟ್ಟಾಗಿ ಎದುರಿಸೋಣ ಇಲ್ಲಿಯ ಸ್ಥಳೀಯ ಸಿಐಟಿಯು ಮುಖದ ರೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಸಿಐಟಿಯು ಪಕ್ಷ ಸೇರ್ಪಡಿಗೊಳ್ಳುವ ಮೂಲಕ ಎ ಐ ಟಿ ಯು ಸಿ ಗೆ ಬಾಯ್ ಎಂದು ಸಿಐಟಿಯು ಗೆ ಜೈ ಎಂದರು ಎಸ್ ಎಂ ಶಫೀ ಯೊಂದಿಗೆ ಅವರ ಬೆಂಬಲಿಗರಾದ ಒಟ್ಟು 14 ಜನ ಸಿಐಟಿಯು ಪಕ್ಷವನ್ನು ಸೇರುವ ಮೂಲಕ ಬಾವುಟವನ್ನು ಎತ್ತಿ ಹಿಡಿದರು ಈ ಸಂದರ್ಭದಲ್ಲಿ ಮಮ್ಮದ್ ಹನೀಫ್, ರಮೇಶ್ ವೀರಾಪುರ್, ಅಲ್ಲಾಭಕ್ಷು, ಶಾಂತಪ್ಪ ಆನ್ವರಿ, ಸಿದ್ದಪ್ಪ ಮುಂಡರಗಿ, ಯಲ್ಲಪ್ಪ, ಮೈನುದ್ದೀನ್, ವೆಂಕೋಬ , ಫಕ್ರುದ್ದೀನ್, ವೆಂಕಟೇಶ್, ಸೇರಿದಂತೆ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ್ ಮಧುಶ್ರೀ




