ಸಿಂಧನೂರು: ಜೂ.3 ರಂದು ಮಂಗಳವಾರ ಸಾಯಂಕಾಲ 4:30 ಕ್ಕೆ ನಗರದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು, ಸಮಾಜದ ಮುಖಂಡರು ಮತ್ತು ವಿವಿಧ ಸಂಘಟನೆ ಮುಖಂಡರ ಸಭೆ ಕರೆದು ಬಕ್ರೀದ್ ಹಬ್ಬದ ಪ್ರಯುಕ್ತ ನಗರದಲ್ಲಿ ಶಾಂತಿ
ಸುವ್ಯವಸ್ಥೆಯಿಂದ ಹಬ್ಬವನ್ನು ಆಚರಿಸಬೇಕು ಶಾಂತಿ ಕದಡಿಸುವ ಪ್ರಯತ್ನವನ್ನು ಮತ್ತು ಕೋಮುದ್ವೇಷ ಹರಡುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುವವರ ಮೇಲೆ ನಿಗಾ ಇಡಲಾಗಿದೆ ಎಂದು ಪೋಲೀಸ್ ಸಬ್ ಇನ್ಸ್ಪೆಕ್ಟರ್ ದುರುಗಪ್ಪ ಎಚ್ಚರಿಸಿದರು
ನಂತರ ಡಿವೈಎಸ್ಪಿ. ಬಿಎಸ್. ತಳವಾರ್ ಮಾತನಾಡಿ ಜೂನ್ 7ರಂದು ಬಕ್ರೀದ್ ಹಬ್ಬದ ಅಂಗವಾಗಿ ನಗರ ಪೊಲೀಸ್ ಠಾಣೆಯಲ್ಲಿ ಸಭೆ ಕರೆದಿದ್ದು ಬಕ್ರೀದ್ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕು .
ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಹಬ್ಬದಲ್ಲಿ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಹಬ್ಬದ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ನಿಗದಿಗಿಂತ ಹೆಚ್ಚು ಜನರು ಸಂಚರಿಸಲು ಅವಕಾಶವಿಲ್ಲ ಮತ್ತು ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ತ್ಯಾಗ ಮತ್ತು ಸೌಹಾರ್ದ ಸಂಕೇತವಾದ ಬಕ್ರೀದ್ ಹಬ್ಬ ಪ್ರೀತಿ ಸೋದರತ್ವ ಸಾರಲು ಈ ಹಬ್ಬ ಆಚರಿಸಲಾಗುತ್ತದೆ ಬೇರೆ ಧರ್ಮೀಯರ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಈ ಹಬ್ಬ ಆಚರಣೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಮುಖಂಡರಾದ ಅಂಬ್ರುಸ್ ಕೊಡ್ಲಿ. ದಾವಲ್ ಸಾಬ್ ದೊಡ್ಮನಿ. ಪಂಪಯ್ಯ ಸ್ವಾಮಿ. ಖಾನ್ ಸಾಬ್. ಶಿವು ಉಪ್ಪಲದೊಡ್ಡಿ. ಬಸವರಾಜ ಹಿರೇಮನಿ. ಪಂಪಾಪತಿ ಬೂದಿವಾಳ. ಶಿವರಾಜ್ ಬಾಗಲವಾಡ. ಮುಮ್ಮಿರಾಜ್ ಮ್ಯಾಕಲ್. ಹಾಗೂ ವಿವಿಧ ಸಮಾಜದ ಸಂಘ ಸಂಸ್ಥೆಯ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು




