ದಾವಣಗೆರೆ: ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ದಾವಣಗೆರೆಯ 01ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 35,000 ರೂ. ದಂಡ ವಿಧಿಸಿ ಆದೇಶಿಸಿದೆ.
ವೃದ್ಧ ದಂಪತಿ ಗುರುಸಿದ್ದಯ್ಯ ಮಠದ ಹಾಗೂ ಸರೋಜಮ್ಮ ಅವರನ್ನು ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಕುಮಾರ (38), ಪರಶುರಾಮ (33) ಹಾಗೂ ಮರಿಸ್ವಾಮಿ (30) ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಜನವರಿ 25, 2025ರಂದು ಎಲೇಬೇತೂರು ಗ್ರಾಮದಲ್ಲಿ ದಂಪತಿಯ ಕೊಲೆ ನಡೆದಿರುವ ಬಗ್ಗೆ ಮೃತರ ಪುತ್ರಿ ಜ್ಯೋತಿ ಎಂ.ಜಿ. ಎಂಬವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.




