Ad imageAd image

ಪತ್ನಿಯನ್ನು ಕೊಂದು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದ ಪತಿ ಸೇರಿ ಐವರು ಅಂದರ್

Bharath Vaibhav
ಪತ್ನಿಯನ್ನು ಕೊಂದು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದ ಪತಿ ಸೇರಿ ಐವರು ಅಂದರ್
WhatsApp Group Join Now
Telegram Group Join Now

ಸವದತ್ತಿ ತಾಲೂಕಿನ ಪ್ರಕರಣವನ್ನು ಬೇಧಿಸಿದ ಪೊಲೀಸರು; ಎಸ್ಪಿ; ಭೀಮಾಶಂಕರ ಗುಳೇದ್ ಮಾಧ್ಯಮಗೋಷ್ಟಿ

ಬೆಳಗಾವಿ: ಕುಡಿದ ನಶೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ ಬೇರೆಯವರ ಜಮೀನಿನಲ್ಲಿ ಎಸೆದು, ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಆರೋಪಿ ಪತಿ ಸೇರಿ ಐದು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಮಾಧ್ಯಮಗಾರರೊಂದಿಗೆ ಅವರು ಮಾತನಾಡಿದರು. ಸವದತ್ತಿ ತಾಲೂಕಿನ ಹಿರಿಯೂರು ಗ್ರಾಮದ ದಾವಲಬಿ ಕಾಗದಾಳ (26) ಕೊಲೆಯಾದವಳು. ಪತ್ನಿಯನ್ನು ಕೊಲೆ ಮಾಡಿದ ಪತಿ ದಿವಾನ್ ಸಾಬ್ ಕಾಣೆಯಾಗಿದ್ದಾಳೆ ಎಂದು ಮುನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಹತ್ತು ದಿನಗಳ ಬಳಿಕ ಪತ್ನಿಯ ಶವ ಸಿಕ್ಕಿದೆ. ಕಳೆದ ಮೂರು ತಿಂಗಳಿನಿಂದ ದಾವಲಬಿ ತವರು ಮನೆಯಲ್ಲಿದ್ದಾಕೆಯನ್ನು ಮನೆಗೆ ಕರೆದುಕೊಂಡು ಬಂದು ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಹಿನ್ನೆಲೆಯಲ್ಲಿ ದಾವಲಬಿ ಮೃತಪಟ್ಟಿದ್ದಾಳೆ ಎಂದರು.

ಈ ಪ್ರಕರಣದಲ್ಲಿ ದಿವಾನ್ ಸಾಬ್, ರಫಿಕ್ ಕಾಗದಾಳ, ರೇಷ್ಮಾ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಂತೇಶ್ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!