ಕಾಳಗಿ : ಪಟ್ಟಣದ ಪ್ರವಾಸಿಮಂದಿರದಲ್ಲಿ ಕಾಳಗಿ ಗ್ರೇಡ 1 ತಸೀಲ್ದಾರ್ ಘಮವತಿ ರಾಠೋಡ್ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆ ಜರುಗಿತು.ಈ ಸಭೆಯನ್ನು ಉದ್ದೇಸಿಸಿ ಮಾತನಾಡಿದ ಅವರು ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕು.
ಮಳೆಗಾಲ ಆರಂಭ ಆಗಿರುವದರಿಂದ ಮಳೆಗಾಲದಲ್ಲಿ ಕಲರಾ, ಡೆಂಗು , ಮಲೇರಿಯಾ ಸೇರಿದಂತೆ ಇತರೆ ಸಾಂಕ್ರಾಮಿಕ ಹರಡದಂತೆ ಅಧಿಕಾರಿಗಳು ನಿಯಂತ್ರಣ ಕ್ರಮಗಳು ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯತ ನಲ್ಲಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು.
ಕುಡಿಯುವ ನೀರಿನ ಪೈಪುಗಳು ಚರಂಡಿಗಳ ಮೂಲಕ ಹಾದು ಹೋಗಿ ಒಡೆದರೆ ತಕ್ಷಣವೇ ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಒಡೆದ ಪೈಪು ಕಲುಸಿತಾ ನೀರು ಸೇರಿ ನಳಗಳ ಮೂಲಕ ಮನೆಗಳಿಗೆ ಪೂರೈಕೆ ಆದರೆ ಜನರಿಗೆ ವಾಂತಿ ಬೀದಿ ಅಂತ ಕಾಯಿಲೆಗಳು ಆಗುವ ಸಂಭವ ಹೆಚ್ಚು ಎಂದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಮುಖ್ಯ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ.ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪಂಕಜ.ಗ್ರೇಡ್-2 ತಹಸಿಲ್ದಾರ್ ರಾಜೇಶ್ವರಿ.ಪಿಎಸ್ಐ ತಿಮ್ಮಯ್ಯ ಬಿಕೆ.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸೂರ್ಯಕಾಂತ ಸಾವಳಗಿ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಹಣಮಂತ ಕುಡಹಳ್ಳಿ




