—————————————————————————–ಲಕ್ನೋದ ಖಾಸಗಿ ಸಮಾರಂಭದಲ್ಲಿ ನಿಶ್ವಿತಾರ್ಥ
ಲಖನೌ: ಮಿಸ್ಟ್ರಿ ಸ್ಪಿನ್ನರ್ ಕುಲದೀಪ್ ಯಾದವ್ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಬಾಲ್ಯದ ಗೆಳತಿ ವಂನ್ಶಿಕಾ ಎಂಬುವರನ್ನು ವಿವಾಹವಾಗುತ್ತಿದ್ದಾರೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರೊಂದಿಗೆ ಕುಲದೀಪ್ ಯಾದವ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಕುಲದೀಪ್ ಯಾದವ್ ಮತ್ತು ವಂನ್ಶಿಕಾ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಈ ಸರಳ ಕಾರ್ಯಕ್ರಮಕ್ಕೆ ಕುಲದೀಪ್ ಯಾದವ್ ತಮ್ಮ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದರು. ಅದರಂತೆ ರಿಂಕು ಸಿಂಗ್ ಸೇರಿದಂತೆ ಹಲವು ಆಪ್ತರು ಈ ಎಂಗೇಜ್ ಮೆಂಟ್ ನಲ್ಲಿ ಪಾಲ್ಗೊಂಡಿದ್ದರು.
ಇತ್ತೀಚೆಗಷ್ಟೇ ರಿಂಕು ಸಿಂಗ್ ಕೂಡ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದರ ಬೆನ್ನಲೇ ಈ ನಿಶ್ಚಿತಾರ್ಥ ನಡೆದಿದೆ.




