ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡ ಬಿದರಿಕಲ್ಲು ವಾರ್ಡಿನ ನವಿಲುನಗರ ಮತ್ತು ಸುಪ್ರಭಾತನಗರ ವಿವಿಧ ರಸ್ತೆಗಳ ಡಾಂಬರಿಕಾರಣ ಕಾಮಗಾರಿಗೆ ಮಾಜಿ ಸಚಿವ ಮತ್ತು ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರು ಪೂಜಾ ಪುನಸ್ಕಾರ ಸಲ್ಲಿಸಿ ರಿಬ್ಬನ್ ಕತ್ತರಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಇನ್ನೂ ಕೆಲವು ಕಡೆ ರಸ್ತೆ ಕಾಮಗಾರಿ ಆಗಬೇಕಿದೆ ಅವುಗಳನ್ನು ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಮತ್ತು ಕಾವೇರಿ ನೀರು ಕ್ಷೇತ್ರದಲ್ಲಿ ಸರಬರಾಜು ಆಗುತ್ತಿದೆ ರಾಜಕಾಲುವೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಮಾತನಾಡಿದ್ದೇನೆ ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ದೊಡ್ಡಬಿದರಿಕಲ್ಲ್ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು ಸರ್ವರಿಗೂ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಹಾಗೂ ಶ್ರೇಷ್ಠ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಅವಿನಾಶ್ ಮಾಸ್ತಿ ಬಂಟಿ, ದೊಡ್ಡ ಬಿದರಿಕಲ್ಲ್ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಲಿಖಿತ್ ಗೌಡ್ರು, ಮಾಜಿ ಅಧ್ಯಕ್ಷ ವಿ.ನಾಗರಾಜ್,ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಂಜುನಾಥ್ ಟ್ರಾವೆಲ್ಸ್, ಶ್ರೀನಿವಾಸ್ ಅಂದ್ರಹಳ್ಳಿ, ಗಂಗರಾಜು ಚೆನ್ನಾಯಕನಪಾಳ್ಯ, ಹನುಮಯ್ಯ,ನಾಗಣ್ಣ, ತೋಪಯ್ಯ ಡೈರಿ ಅಧ್ಯಕ್ಷ, ದೇವರಾಜ್, ವಾಸು ತಿಪ್ಪೇನಹಳ್ಳಿ, ತೋಪಯ್ಯ, ರವಿ ಅಂದ್ರಹಳ್ಳಿ, ಗಂಗಣ್ಣ, ಅಂದ್ರಹಳ್ಳಿ, ಯೋಗೇಶ್, ಲಕ್ಷ್ಮೀಪತಿ, ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ , ಚಂದ್ರಕಲಾ,ವಸಂತಮ್ಮ, ಮೇರಿಯಮ್ಮ, ಕೆಂಚಮ್ಮ, ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೇರಿದಂತೆ ಮುಖಂಡರು ಮಹಿಳೆಯರು ಕಾರ್ಯಕರ್ತರು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




