ಹಿರಿಯ ಆಟಗಾರರ ಗೈರು ಹಾಜರಿಯನ್ನು ನೀಗಿಸಲಿದ್ದಾರೆ ಕಿರಿಯರು
ನವದೆಹಲಿ:ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೊಸ ಉದಯೋನ್ಮುಖ ಆಟಗಾರರಿರುವ ಭಾರತ ಕ್ರಿಕೆಟ್ ತಂಡ ರೋಹತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರ ಗೈರು ಹಾಜರಿಯ ಕೊರತೆಯನ್ನು ನೀಗಿಸಿ ಮುಂದೆ ನಡೆಯಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ ನಿಂದ ಹಿರಿಯ ಆಟಗಾರರಿಬ್ಬರು ವಿದಾಯ ಘೋಷಣೆ ಮಾಡಿದ್ದಾರೆ. ಆದರೆ ಶುಭಮಾನ್ ಗಿಲ್ ಅವರ ಸಾರಥ್ಯದ ತಂಡದಲ್ಲಿರುವ ಯಶಸ್ವಿ ಜೈಸ್ವಾಲ್, ದ್ರುವ್ ಜುರೆಲ್ ಕರುಣ್ ನಯ್ಯರ ಹಾಗೂ ಶಾಯಿ ಸುದರ್ಶನ್ ರಂತಹ ಆಟಗಾರರು ಟೆಸ್ಟ್ ಕ್ರಿಕೆಟ್ ನಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ತಿಳಿಸಿದರು.




