ಅರಸೀಕೆರೆ: ಇಸ್ಲಾಮಿಕ್ ಕ್ಯಾಲೆಂಡರ್ನ 12 ನೇ ತಿಂಗಳಲ್ಲಿ ‘ಈದ್-ಉಲ್-ಅಜಹಾ’ ಹಬ್ಬವನ್ನು ಆಚರಣೆ
ಮುಸ್ಲಿಂ ಸಮುದಾಯದ ಜನರಿಗೆ ಈ ಹಬ್ಬ ಬಹಳ ವಿಶೇಷವಾಗಿದೆ. ಈದ್-ಉಲ್-ಅಝಾ ಸಂದರ್ಭದಲ್ಲಿ ತ್ಯಾಗವನ್ನು ಮಾಡಲಾಗುತ್ತದೆ. ಆದ್ದರಿಂದ ಈ ಹಬ್ಬವನ್ನು ಬಕ್ರೀದ್ ಎಂದೂ ಕರೆಯುತ್ತಾರೆ.
ಇಂದು ಬಕ್ರೀದ್ ಹಬ್ಬದ ಪ್ರಯುಕ್ತ ಸುನ್ನಿ ಜಾಮಿಯಾ ಮಸೀದಿಯಾ ಮುಂಭಾಗದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸೇರಿಕೊಂಡು ಮೆರವಣಿಗೆ ಮೂಲಕ ಹುಳಿಯಾರ್ ರಸ್ತೆ ಪೇಟೆ ಬೀದಿ, ಬಿ ಹೆಚ್ ರಸ್ತೆ ಮಾರ್ಗವಾಗಿ ದೇವರ ಸ್ಮರಣೆ ಮಾಡಿಕೊಂಡು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ಸುನ್ನಿ ಜಾಮಿಯಾ ಮಸೀದಿಯಾ ಧರ್ಮ ಗುರುಗಳು ಬಕ್ರೀದ್ ಹಬ್ಬದ ವಿಶೇಷತೆ ಬಗ್ಗೆ ತಿಳಿಸಿದರು. ಹಾಗೂ ಪ್ರವಾದಿಗಳಲ್ಲಿ ಒಬ್ಬರಾದ ಪ್ರವಾದಿ ಇಬ್ರಾಹಿಂರು ತಮ್ಮ ಮಗನಾದ ಇಸ್ಮಾಯಿಲ್ ರವರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಬಕ್ರೀದ್ ಎನ್ನಲಾಗುತ್ತದೆ ಎಂದು ತಿಳಿಸಿದರು.ಇದೇ ವೇಳೆ ನಾಳಿನ ಜನತೆಯ ಕಷ್ಟ ದೋಷಗಳನ್ನು ಹೋಗಲಾಡಿಸಲು ಮತ್ತು ಅನಾರೋಗ್ಯ ಪಿಡಿತ ಜನತೆಗೆ ಶೀಘ್ರವಾಗಿ ಗುಣವಾಗಲಿ ಎಂಬುದಾಗಿ ಸಮೋಹಿಕವಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಮಸೀದಿಯ ಧರ್ಮಗಳು ಉಪಸ್ಥಿತರಿದ್ದರು.ನಂತರ ಒಬ್ಬರಿಗೊಬ್ಬರು ಬಕ್ರೀದ್ ಹಬ್ಬದ ಶುಭಾಶಯಗಳು ಕೋರಿ ಪರಸ್ಪರ ಶುಭಾಶಯಗಳು ಹಂಚಿಕೊಂಡಿದ್ದು ವಿಶೇಷವಾಗಿತ್ತು.ಈ ಸಂದರ್ಭದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮೇಟಿಯ ಅಧ್ಯಕ್ಷರು ,ಕಾರ್ಯದರ್ಶಿ, ಕಮಿಟಿಯ ಸದಸ್ಯರುಗಳು ಹಾಗೂ ನಗರದ ಮುಸ್ಲಿಂ ಸಮಾಜದ ಹಲವು ಕಮಿಟಿಯ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಸದಸ್ಯರುಗಳು ಹಾಗೂ ನಗರಸಭೆ ಸದಸ್ಯರುಗಳು ಸಮಾಜದ ಗಣ್ಯ ವ್ಯಕ್ತಿಗಳು ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಪರ್ವಿಜ್ ಅಹಮದ್ ಅರಸೀಕೆರೆ
ವರದಿ: ರಾಜು ಅರಸಿಕೆರೆ




