Ad imageAd image

ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿಜೇತ ವಿದ್ಯಾರ್ಥಿಗಳ ಸತ್ಕಾರ

Bharath Vaibhav
ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿಜೇತ ವಿದ್ಯಾರ್ಥಿಗಳ ಸತ್ಕಾರ
WhatsApp Group Join Now
Telegram Group Join Now

ಚಿಕ್ಕೋಡಿ: ಕೆ. ಎಲ್. ಇ. ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಎರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಂತೇಶ ಕವಟಗಿಮಠ, ನಿರ್ದೇಶಕರು, ಕೆ ಎಲ್ ಇ ಸಂಸ್ಥೆ, ಬೆಳಗಾವಿ –
ನಮ್ಮ ಚಿಕ್ಕೋಡಿ ಭಾಗದ ಮಕ್ಕಳು ಮಂಗಳೂರು-ಬೆAಗಳೂರಿನಲ್ಲಿ ಹೆಚ್ಚು ಖರ್ಚು ಮಾಡಿ ಪಿ ಯು ಶಿಕ್ಷಣ ಪಡೆಯುತ್ತಿದ್ದನ್ನು ಗಮನಿಸಿ ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಕೆ ಎಲ್ ಇ ಸಂಸ್ಥೆ ಚಿಕ್ಕೋಡಿಯಲ್ಲಿ ಇಂಡಿಪೆAಡೆAಟ್ ಪಿ ಯು ಕಾಲೇಜು ಪ್ರಾರಂಭಿಸಿದೆ. ಇಂದು ಇಲ್ಲಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೆವೆ.


ಮುಂಬರುವ ದಿನಗಳಲ್ಲಿ ನಾವು ಇದೇ ಕ್ಯಾಂಪಸನಲ್ಲಿ ಇಂಟೆಗ್ರೆಟೆಡ್ ಕಾಮರ್ಸ ಕೊರ್ಸ ಆರಂಬಿಸಲಿದ್ದೆವೆ. ಅದರಲ್ಲಿ ಸಿ ಎ ಫೌಂಡೆಶನ್ ತರಬೇತಿ ನೀಡಲಿದ್ದೆವೆ ಎಂದರು.
ರಾಜ್ಯ ಸರ್ಕಾರ ನಮ್ಮ ಪಿಯುಸಿ ಫಠ್ಯಕ್ರಮದಲ್ಲಿ ಬದಲಾವಣೆ ತರಬೇಕಿದೆ. ನಮ್ಮ ಕರ್ನಾಟಕದ ಮಕ್ಕಳಿಗೆ ನೀಟ್ ಮತ್ತು ಜೆಇಇ ಪರೀಕ್ಷೆಗೆ ಅನೂಕೂಲವಾಗುವ ರೀತಿಯಲ್ಲಿ ಫಠ್ಯಕ್ರಮದಲ್ಲಿ ಬದಲಾಯಿಸಲೂ ಶಿಕ್ಷಣ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೆನೆ ಎಂದರು.
ಇಂದು ನಮ್ಮ ಭಾಗದ ಪಾಲಕರು ಪಿ ಯು ಶಿಕ್ಷಣಕ್ಕಾಗಿ ಮಂಗಳೂರಿನAತಹ ಸಿಟಿಗಳಿಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಅಲ್ಲಿನ ಹವಾವಾನ, ಊಟದ ಪದ್ಧತಿ, ಆಡುವ ಭಾಷೆ ನಮ್ಮ ಮಕ್ಕಳಿಗೆ ಒಗ್ಗುವದಿಲ್ಲ. ದೊಡ್ಡ-ದೊಡ್ಡ ಊರುಗಳಲ್ಲಿ ಮಕ್ಕಳಿಗೆ ಹಾಳಾಗಲು ಅವಕಾಶಗಳು ಹೆಚ್ಚು, ಚಿಕ್ಕ ಊರುಗಳಲ್ಲಿ ಅವಕಾಶವಿರುವದಿಲ್ಲ.
ಪಾಲಕರು ಕೇವಲ ಇಂಜಿನಿಯರಿAಗ್ – ಮೆಡಿಕಲ್ ಬೆನ್ನು ಹತ್ತದೇ ಮಕ್ಕಳ ಮನಸ್ಥಿತಿ ಅರಿತು ಅದಕ್ಕನೂಸಾರವಾಗಿ ಕೊರ್ಸ ಆಯ್ಕೆ ಮಾಡಿಕೊಳ್ಳಿ. ನಮ್ಮ ಕೆ ಎಲ್ ಇ ಸಂಸ್ಥೆಯು ಬೆಳಗಾವಿಯಲ್ಲಿ ಬಿ ಎಸ್ಸಿ ಮತ್ತು ಎಮ್ ಎಸ್. ಸಿ. ಹೆಲ್ತ ಸಾಯನ್ಸ ನಲ್ಲಿ ವಿವಿಧ ಕೊರ್ಸಗಳನ್ನ ಆರಂಭಿಸಿದೆ ಅವುಗಳಿಗೆ ವಿಪುಲ ಅವಕಾಶಗಳಿವೆ.
ಸಾಧನೆಗೆ ಬಡತನ, ಜಾತಿ ಜನಾಂಗ ಅಡ್ಡಿಯಾಗದು. ನಮ್ಮ ಕೆ ಎಲ್ ಇ ಸಂಸ್ಥೆಯ ವಿದ್ಯಾರ್ಥಿನಿಯಾದ ಸುಧಾಮುರ್ತಿ ಇನಫೊಸಿಸ್ ಸಂಸ್ಥೆ ಕಟ್ಟಿದಾರೆ. ೨೧ ನೇಯ ಶತಮಾನ ಭಾರತೀಯರ ಶತಮಾನ. ಹಿಂದಿನ ಕಾಲದಲ್ಲಿ ಆಸ್ತಿಯಿಂದ ವ್ಯಕ್ತಿಯ ಮೌಲ್ಯವನ್ನು ಅಳೆಯುತ್ತಿದ್ದರು, ಆದರೆ ಇಂದು ಜ್ಞಾನದಿಂದ ಅಳೆಯುತ್ತಾರೆ. ಜನ್ಮದಿಂದ ತಂದೆ-ತಾಯಿ ಯಾವುದೇ ಸಮಾಜಕ್ಕೆ ಸೇರಿದವರಾಗಿರಬಹುದು ಆದರೆ ಶಿಕ್ಷಣ ಪಡೆದುಕೊಳ್ಳುವುದು ನಿಮ್ಮ ಆದ್ಯತೆಯಾಗಬೇಕು. ಡಾ. ಎ ಪಿ ಜೆ ಅಬ್ದುಲ್ ಕಲಾಮ್ ಅವರು ಹುಟ್ಟಿದ್ದು ಹಳ್ಳಿಯಲ್ಲಿ ಆದರೆ, ನಿರಂತರ ಪರಿಶ್ರಮದಿಂದ ಅವರು ದೇಶದ ಅತ್ಯುನ್ನತ ರಾಷ್ಟçಪತಿ ಹುದ್ದೆಯನ್ನು ಪಡೆದುಕೊಂಡರು. ಪಿ ಯು ಮುಗಿಯುವ ತನಕ ಮೊಬೈಲನಿಂದ ದೂರವಿರಿ. ಮೊಬೈಲನಿಂದ ಒವರ ಎಕ್ಷಪೊಜರ ಆಗುತ್ತಿದ್ದಾರೆ. ಸೊಶಿಯಲ್ ಮಿಡಿಯಾನಿಂದ ಮಕ್ಕಳು ಕೆಡುತ್ತಿದ್ದಾರೆ.
ಮಾಡಬೇಕೆಂಬ ಛಲವಿದ್ದರೇ ಯಾವುದೇ ಅಡೆತಡೆ ಬರುವದಿಲ್ಲ. ನೀವು ಒಂದು ಸಲ ಅಂದುಕೊAಡರೇ, ಗಟ್ಟಿ ನಿರ್ಧಾರ ಮಾಡಿದರೆ, ಕಾಲೇಜು, ಪಾಲಕರು ಸಪೊರ್ಟ ಮಾಡುತ್ತಾರೆ.
ಕೆ ಎಲ್ ಇ ಸಂಸ್ಥೆಯ ಅಜೀವ ಸದಸ್ಯರು ಹಾಗೂ ಕೆ ಎಲ್ ಇ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪುರೆ ಮಾತನಾಡಿ –
ಶೈಕ್ಷಣಿಕ ಯಶಸ್ಸಿನಲ್ಲಿ ವಿದ್ಯಾರ್ಥಿ-ಪಾಲಕ-ಶಿಕ್ಷಕ ಎಂಬ ಮೂರು ಆಧಾರ ಸ್ಥಂಬಗಳಿವೆ. ವಿದ್ಯಾರ್ಥಿಗಳ ಸತತ ಪರಿಶ್ರಮ, ಪಾಲಕರ ಕಾಳಜಿ, ಶಿಕ್ಷಕರ ಮಾರ್ಗದರ್ಶನ ಬಹುಮುಖ್ಯ ಎಂದರು. ಯಾವುದು ಕಠಿಣವಾಗಿರುವುದಿಲ್ಲ, ನಾವು ಸವಾಲಾಗಿ ಸ್ವಿಕರಿಸಿದರೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದಾಗಿದೆ.
ಕೆಎಲ್‌ಇ ಪಿಯು ಕಾಲೇಜುಗಳ ಸದಸ್ಯ ಕಾರ್ಯದರ್ಶಿ ಹಾಗೂ ಅಜೀವ ಸದಸ್ಯರಾದ ಶ್ರೀ. ಶೀತಲ ನಂಜಪ್ಪನವರ ಮಾತನಾಡಿ –
ಮಕ್ಕಳಿಗೆ ಮೋಬೈಲ್ ನೀಡದಿರಿ. ಮೋಬೈಲ್‌ನಲ್ಲಿ ಒಳ್ಳೇಯದೂ ಹಾಗೆಯೇ ಕೆಟ್ಟದ್ದು ಇದೆ. ಆದರೆ ಕೆಟ್ಟದ್ದು ಆಕರ್ಷಿಸುತ್ತದೆ. ಈ ಎರಡು ವರ್ಷ ಹೆಚ್ಚಿನ ಸಮಯ ಓದಿಗಾಗಿ ನೀಡಿ. ಇಗೀನ ಮಕ್ಕಳಲ್ಲಿ ಬರವಣೆಗೆ ಕಡಿಮೆ, ಪಾಲಕರು ಅವರ ಜೊತೆಗಿದ್ದು, ದಿನಾಲೂ ಅವರೊಂದಿಗೆ ಚರ್ಚಿಸಿ ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣವಲ್ಲ, ವಿಭಿನ್ನವಾಗಿರುತ್ತದೆ. ಅದಕ್ಕೆ ಸರಿಯಾದ ಸಿದ್ಧತೆ ಬೇಕು ಎಂದರು.
ಈ ಸಂದರ್ಭದಲ್ಲಿ ದ್ವೀತಿಯ ಪಿಯುಸಿ, ಸಿಇಟಿ, ನಿಟ್, ಜೆಇಇ ಪರಿಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.
ಕು. ಪ್ರದೀಪ ಗುದಗೆ, ಸೃಷ್ಟಿ ವರಾಳೆ ತಮ್ಮ ಅನುಭವ ಹಂಚಿಕೊAಡರು.
ಮಹೇಶ ಸನ್ನಿಯವರ ಸ್ವಾಗತಗೀತೆ ಹಾಡಿದರು.
ಪ್ರಾಚಾರ್ಯರಾದ ಪಿ. ವೆಂಕಟರೆಡ್ಡಿ ಸ್ವಾಗತಿಸಿದರು.
ಶ್ರೀಮತಿ. ಗಂಗಾ ಅರಭಾಂವಿ, ಅಂಕಿತಾ ಮಗದುಮ್ಮ ನಿರೂಪಿಸಿದರು.
ಶ್ರೀ. ಜಯಾನಂದ ಮುನವಳ್ಳಿ, ನಿರ್ದೇಶಕರು, ಕೆ ಎಲ್ ಇ ಸಂಸ್ಥೆ, ಬೆಳಗಾವಿ, ಕೆ ಎಲ್ ಇ ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಅಪೂರ್ವಾ ಪಾಟೀಲ ವಂದಿಸಿದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!