ಬೆಂಗಳೂರು : ಚಿಕ್ಕವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿದ ಅಕ್ಕ! ಅಕ್ಕಮಹಾದೇವಿ ಅವರು ಎದುರಿಸಿದ ಪರೀಕ್ಷೆಗಳು ಬಹಳಷ್ಟು ಸಾಕ್ಷಾತ್ ಶಿವ ಮಲ್ಲಿಕಾರ್ಜುನನ್ನು ಪತಿ ಎಂದು ಸ್ವೀಕರಿ ಲೌಕಿಕ ಜಗತ್ತನ್ನು ಧಿಕ್ಕರಿಸಿ ಕೇಶಾಂಬರಿಯಾಗಿ ನಡೆದ ಅಕ್ಕಮಹಾದೇವಿ ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.

ಅವರು ಕ್ಷೇತ್ರದ ವಿಘ್ನೇಶ್ವರ ಬಡಾವಣೆಯಲ್ಲಿ ಅಕ್ಕನ ಬಳಗ ಮಹಿಳಾ ಸಮಾಜ ಸಂಘ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್ ಆರಾಧ್ಯ ಮತ್ತು ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಆರಾಧ್ಯ ಅವರ ನೇತೃತ್ವದಲ್ಲಿ ಅಕ್ಕನ ಬಳಗ ಮಹಿಳಾ ಸಮಾಜದ 12ನೇ ವಾರ್ಷಿಕೋತ್ಸವ, ಅಕ್ಕಮಹಾದೇವಿ ಜಯಂತಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಲ್ಲಿಸಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವಚನಕಾರ್ತಿ ಅಕ್ಕ ಮಹಾದೇವಿ ಜೀವನ ಮಹಿಳೆಯರಿಗೆ ಆದರ್ಶ ಪ್ರಿಯವಾದುದು ಅಕ್ಕ ಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೋಬ್ಬರು ಕನ್ನಡ ಪ್ರಥಮ ಮಹಿಳಾ ಕವಯಿತ್ರಿಯಾಗಿದ್ದಾರೆ ಶ್ರೇಷ್ಠ ಅನುಭಾಮಿಯಾಗಿರುವಂದತ ಶ್ರೇಷ್ಠ ವಚನಕಾರ್ತಿಯೂ ಆಗಿದ್ದಾಳೆ ಎಂದು ಬಸವ ಧ್ಯಾನ ಸೆಂಟರ್ ಅಧ್ಯಕ್ಷೆ ಪೂಜ್ಯ ಶ್ರೀ ಓಂಕಾರೇಶ್ವರಿ ಅಕ್ಕ ಹೇಳಿದರು.
ಈ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಯದೇವ್ ಮಾತನಾಡಿ ಶರಣರ ವಚನಗಳು ನಮ್ಮ ಬದುಕಿಗೆ ಆದರ್ಶಗಳನ್ನು ಸಾರುವ ಸಾಲುದೀಪಗಳಾಗಿ ಬೆಳಕನ್ನು ನೀಡುತ್ತವೆ. ಆ ವಚನಗಳು ಬೀರುವ ಬೆಳಕಲ್ಲಿ ನಾವು ಸಾಗಿದಲ್ಲಿ ನಮ್ಮ ಬದುಕು ಏಳಿಗೆಯನ್ನು ಪ್ರಗತಿಯನ್ನು ಕಾಣಬಹುದು ಎಂದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಪ್ರಭಾವಿ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ರಾಜೇಂದ್ರ ಮತ್ತು ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಯದೇವ್ ಮಾತನಾಡಿದರು.
ಅಕ್ಕನ ಬಳಗ ಮಹಿಳಾ ಸಮಾಜದ ಅಧ್ಯಕ್ಷ ಪ್ರೇಮಾ ಆರಾಧ್ಯ ಸರ್ವರಿಗೂ ಸ್ವಾಗತಿಸಿದರು.
ಅಕ್ಕನ ಬಳಗ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್ ಆರಾಧ್ಯ ಅಕ್ಕನ ಬಳಗ ಮಹಿಳಾ ಸಮಾಜದ 12ನೇ ವರ್ಷದ ವಾರ್ಷಿಕೋತ್ಸವ ಕುರಿತು ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕ ಬಾಣ ವಾರದ ವೀರ ಶೈವ ಲಿಂಗಾಯತ ಸಮಾಜ ಅಧ್ಯಕ್ಷ ಎಂ.ಎಚ್ ಪಾಟೀಲ್, ಸಿ.ಎಸ್ ಆರಾಧ್ಯ, ರವೀಶ್ ಆರಾಧ್ಯ, ಪುಟ್ಟಸ್ವಾಮಿ, ಸ್ವಾಮಿ ಆರಾಧ್ಯ, ರೇಖಾ, ಪ್ರೇಮಾ ಆರಾಧ್ಯ, ಸಾಕಮ್ಮ, ಮಂಜುಭಾಷಿಣಿ, ಅಕ್ಕನ ಬಳಗದ ಪದಾಧಿಕಾರಿಗಳು ಭಕ್ತಾದಿಗಳು ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




