ಚಿಕ್ಕೋಡಿ : ಭಾರತದಲ್ಲಿ 70% ಕ್ಕಿಂತ ಹೆಚ್ಚು ರೈತರು ವಾಸಿಸುತ್ತಿದ್ದಾರೆ. ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಓಟದ ಮತ್ತು ಎತ್ತಿನ ಬಂಡಿ ಪ್ರದರ್ಶನಗಳ ಸಂಪ್ರದಾಯವನ್ನು ಕಾಪಾಡಿಕೊಳ್ಳಲು ಭವ್ಯವಾದ ಎತ್ತುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಬಸವಜ್ಯೋತಿ ಯುಥ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಕಾರಹುಣ್ಣಿಮೆ ಅಂಗವಾಗಿ ಜೊಲ್ಲೆ ಗ್ರೂಪ್ ಆಯೋಜಿಸಿದ್ದ ರಾಜ್ಯಮಟ್ಟದ ಎತ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಸದಲಗಾದ ಶ್ರಧ್ದಾನಂದ ಸ್ವಾಮೀಜಿಯವರು ಮಾತನಾಡಿ ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳನ್ನು ಇಂದು ಸಂರಕ್ಷಿಸಲು ಇಂತಹ ಪ್ರದರ್ಶನಗಳನ್ನು ಆಯೋಜಿಸುವ ಅವಶ್ಯಕತೆಯಿದೆ .ಜೊಲ್ಲೆ ಗ್ರೂಪ್ ಯಾವಾಗಲೂ ಇಂತಹ ಕಾರ್ಯಕ್ರಮಗಳನ್ನು ಬೆಂಬಲಿಸುತ್ತದೆ ಎಂದರು.
ಚಾಂಪಿಯನ್ ಎತ್ತಿನ ಸ್ಪರ್ಧೆಯಲ್ಲಿ ಭೇಂಡವಾಡದ ಮಹಾದೇವ ಪೂಜಾರಿ, ರಾಮಚಂದ್ರ ಸೂರ್ಯವಂಶಿ ಮತ್ತು ಈರಣ್ಣ ಹಿರೇಗೋಣಿ ಅವರ ಎತ್ತುಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.ವಿಂದತಿ ಮತ್ತು ಎರಡು-ಹಲ್ಲಿನ ಜೋಡಿ ಎತ್ತುಗಳ ಸ್ಪರ್ಧೆಯಲ್ಲಿ, ಕಣಗಾಲದ ಚಿದಾನಂದ ಹಿರೇಮಠ, ಖಡಕಲಾಟನ ಸಚಿನ್ ಕಾಮ್ಟೆ, ನಿಡಸೋಸಿ ಅಪ್ಪಾಸಾಹೇಬ ಹೆಗರೆ ಮತ್ತು ನಾಲ್ಕು ಮತ್ತು ಆರು-ಹಲ್ಲಿನ ಜೋಡಿ ಎತ್ತುಗಳ ಸ್ಪರ್ಧೆಯಲ್ಲಿ ಬೆಂವಾಡದ ಕಲ್ಲಪ್ಪ ಮಗದುಮ್ಮ ಬೆಂಜಚನಮರಡಿಯ ಮಲ್ಲಪ್ಪ ರುದ್ರಾಪುರ, ನವನಾಥ ಚೌಗುಲೆ ಅವರ ಹೋರಿಗಳು ಬಹುಮಾನ ಪಡೆದುಕೊಂಡವು.
ಎತ್ತುಗಳ ಜೋಡಿ ಸ್ಪರ್ಧೆಯಲ್ಲಿ, ಸೋಲಾಪುರದ ಸುರೇಶ ಖೋತ, ಎಕ್ಸಾಂಬಾದ ಭೀಮ ಬಾಕಳೆ, ಎಕ್ಸಾಂಬಾದ ಶಿವ ಕಲ್ಯಾಣಿ, ಆಕರ್ಷಕ ಹಸುಗಳ ಸ್ಪರ್ಧೆಯಲ್ಲಿ, ಹೃತಿಕ ಮಲಗಾಂವೆ, ಹುಪರಿಯ ಉತ್ಕರ್ಷ್ ಸುತಾರ ಮತ್ತು ಸುಟ್ಟಟ್ಟಿಯ ರಾಯಪ್ಪ ಖೋತ ಇವರು ಬಹುಮಾನಗಳನ್ನು ಪಡೆದುಕೊಂಡರು.ಎಕ್ಸಂಬಾದ ಸುತ್ತಮುತ್ತಲಿನ ಎತ್ತುಗಳ ಜೋಡಿ ಸ್ಪರ್ಧೆಯಲ್ಲಿ, ಮಲಿಕವಾಡದ ಮಹಾದೇವ ಗಜಬರ, ಎಕ್ಸಾಂಬಾದ ರವೀಂದ್ರ ಕಲ್ಯಾಣಿ, ಯಾದನವಾಡಿಯ ರಾಕೇಶ ಖೋತ ಬಹುಮಾನಗಳನ್ನು ಪಡೆದುಕೊಂಡರು.
ನಾಲ್ಕು ಮತ್ತು ಆರು ಹಲ್ಲಿನ ಸ್ಪರ್ಧೆಯಲ್ಲಿ, ಯಕ್ಷಂಬಾದ ದಯಾನಂದ ಘಾಕೆ,ಮತ್ತು ಮಹಾದೇವ ಕೋಳಿ,ದುಂಡಯ್ಯ ವಸ್ತ್ರದ ಮತ್ತು ಜೋಡಿ ಎತ್ತಿನ ಸ್ಪರ್ಧೆಯಲ್ಲಿ, ಯಕ್ಸಂಬಾದ ಅಶೋಕ ಭಂಗೆ ಮತ್ತು ಸುರೇಶ ಖೋತಯವರಿಗೆ ಎತ್ತುಗಳಿಗೆ ಬಹುಮಾನಗಳನ್ನು ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧೆಗಳಿಗೂ ಸಮಾಧನಕರ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ಆಶಾಜ್ಯೋತಿ ಬುಧ್ದಿಮಾಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಅಪ್ಪಾಸಾಹೇಬ ಜೊಲ್ಲೆ, ಜಯಾನಂದ ಜಾಧವ, ಡಾ.ವಿನಾಯಕ ಪಾಟೀಲ, ಶಂಕರ ಬಾಕಳೆ, ರಾವಸಾಹೇಬ ಬಾಕಳೆ, ಉದಯ ರಾಯಜಾಧವ, ಅಣ್ಣಪ್ಪ ಸಾತ್ವಾರ, ಪ್ರಕಾಶ ವಾಳಕೆ, ಕುಮಾರ ಕುಂಬಾರ, ವೀರಪಾಕ್ಷ ಬಾಕಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




