ಮೊಳಕಾಲ್ಮುರು: ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕೂಡ ಪರಿಸರ ಸಂರಕ್ಷಣೆ ಮಾಡಬೇಕು ಮತ್ತು ಹೆಚ್ಚಾಗಿ ಗಿಡಗಳನ್ನು ಬೆಳೆಸಬೇಕು ಎಂದು ಶಾಸಕ ಎನ್ ವೈ ಗೋಪಾಲಕೃಷ್ಣರವರು ತಿಳಿಸಿದರು.ಪಟ್ಟಣದ ಗಾಯಿತ್ರಿ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಸೋಮವಾರ ಬೆಳಿಗ್ಗೆ 11:50ಕ್ಕೆ ಶಾಲಾ ಪರಿಸರ ಜಾಗೃತಿ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಅರಣ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಎನ್ ವೈ ಗೋಪಾಲಕೃಷ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ತನ್ನ ಉಳಿವಿಗಾಗಿ ಪರಿಸರ ಸಂರಕ್ಷಣೆ ಮಾಡಬೇಕು,ಪ್ರತಿಯೊಬ್ಬರು ಮನೆಗೆ ಎರಡು ಗಿಡ ನೆಡಬೇಕು , ಗಿಡಗಳನ್ನು ಮಗುವಿನಂತೆ ಪಾಲನೆ ಪೋಷಣೆ ಮಾಡಬೇಕು ಪರಿಸರ ದಿನಾಚರಣೆ ಕಾರ್ಯಕ್ರಮಗಳು ಆಚರಣೆಗೆ ಸೀಮಿತವಾಗಬಾರದು ಎಲ್ಲಾ ಇಲಾಖೆಯ ಅಧಿಕಾರಿಗಳು ಕನಿಷ್ಠ ಗಿಡಗಳನ್ನಾದರು ಹಾಕಲು ಪ್ರೇರೇಪಿಸಬೇಕು. ಶಿಕ್ಷಕರು ಶಾಲಾ ವೇಳೆಯಲ್ಲಿ ಬರೀ ಪಾಠ ಪ್ರವಚನಕ್ಕೆ ಸೀಮಿತವಾಗದೆ ಪರಿಸರ ಪ್ರೇಮ ಮೆರೆಯಬೇಕು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಯಾವ ಶಿಕ್ಷಕರಿಗೆ ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಿ ಪೋಷಿಸಿಸುವಂತಹ ಕಾಳಜಿ ಇರುವುದಿಲ್ಲವೋ ಅಂತಹ ಶಿಕ್ಷಕರನ್ನು ಸಸ್ಪೆಂಡ್ ಮಾಡಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ನಾವು ಪರಿಸರವನ್ನು ಸಂರಕ್ಷಣೆ ಮಾಡದಿದ್ದಲ್ಲಿ ಮುಂದಿನ ಪೀಳಿಗೆಯಲ್ಲಿ ಗಿಡಗಳನ್ನು ನೋಡಲಾಗದೆ ಚಿತ್ರದಲ್ಲಿ ಮಕ್ಕಳಿಗೆ ತೋರಿಸುವಂತಹ ಪರಿಸ್ಥಿತಿ ಬರಬಹುದು, ಆದ್ದರಿಂದ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಅದೇ ರೀತಿ ಹಳ್ಳಿಗಳಲ್ಲಿ ಹೆಚ್ಚು ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು ಹಳ್ಳಿಯ ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ ಬಿಇಒ ನಿರ್ಮಲದೇವಿ,ವಲಯ ಸಂರಕ್ಷಣಾಧಿಕಾರಿ ಶಿವಾನಂದ, ತಹಶೀಲ್ದಾರ್ ಜಗದೀಶ್,ತಾಲೂಕ ಪಂಚಾಯತಿ ಇಒ ಹನುಮಂತಪ್ಪ, ಸಿಪಿಐ ವಸಂತ ವಿ ಆಸೋದೆ ಪಟ್ಟಣ ಪಂಚಾಯತಿ ಸದಸ್ಯರಾದ ಎಸ್ ಖಾದರ್, ಎಂ ಅಬ್ದುಲ್ಲಾ ನಾಮ ನಿರ್ದೇಶನ ಸದಸ್ಯರಾದ ಜಿ ಪ್ರಕಾಶ್ ಮುಖಂಡರಾದ ವಸಿ ಉಲ್ಲಾ ಪಿ ಗೋಪಾಲ್ ಅರ್ಜನ್ಹಳ್ಳಿ ನಾಗರಾಜ್ ಭೀಮಣ್ಣ ವಕೀಲರಾದ ವಿಜಯ್ ರಾಯಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸುರೇಶ್ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರಿದ್ದರು.
ವರದಿ: ಪಿಎಂ ಗಂಗಾಧರ




