ನವದೆಹಲಿ : ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅವರು ತಮ್ಮ ಕಿರಿಯ ಪುತ್ರ ಅಭಿಮನ್ಯು ಅವರನ್ನು ವಿಶೇಷವಾಗಿ ರೈತನ ಪುತ್ರಿಯೊಂದಿಗೆ ನಿಶ್ಚಿತಾರ್ಥ ಮಾಡಿದ್ದು ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ನಿನ್ನೆ ಭೋಪಾಲ್ನ ಅವರ ನಿವಾಸದಲ್ಲಿ ಸರಳವಾಗಿ ಈ ಕಾರ್ಯಕ್ರಮ ನೆರವೇರಿಸಲಾಗಿದೆ.
ಖಾರ್ಗೋನ್ ಜಿಲ್ಲೆಯ ಸೆಲ್ಡಾ ಗ್ರಾಮದ ಪ್ರಗತಿಪರ ರೈತ ದಿನೇಶ್ ಯಾದವ್ ಅವರ ಪುತ್ರಿ ಡಾ.ಇಶಿತಾ ಯಾದವ್ ಅವರೊಂದಿಗೆ ಸಿಎಂ ಪುತ್ರ ಅಭಿಮನ್ಯು ಜೊತೆಗೆ ನಿಶ್ಚಿತಾರ್ಥ ಮಾಡಲಾಗಿದೆ. ದಿನೇಶ್ ಅವರು ಈಗಾಗಲೇ ಜಿಲ್ಲೆಯ ರೈತಾಪಿ ವಲಯದಲ್ಲಿ ಹೆಸರು ಮಾಡಿದ್ದಾರೆ ಎಂದು ವರದಿಯಾಗಿದೆ.
ನಿಶ್ಚಿತಾರ್ಥ ಕುರಿತು ಸಿಎಂ ಮೋಹನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಸಂತಸ ವಿಷಯವನ್ನು ಹಂಚಿಕೊಂಡಿದ್ದು, ಕಾರ್ಯಕ್ರಮದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಬಾಬಾ ಮಹಾಕಾಲ್ ಹಾಗೂ ಗೋಪಾಲ ಕೃಷ್ಣ ಅವರ ಆಶೀರ್ವಾದ ಮತ್ತು ತಂದೆ ಮತ್ತು ತಾಯಿಯ ಆಶೀರ್ವಾದದೊಂದಿಗೆ, ಪುತ್ರ ಡಾ.ಅಭಿಮನ್ಯು ಯಾದವ್ ಅವರ ನಿಶ್ಚಿತಾರ್ಥವು ಖಾರ್ಗೋನ್‌ನ ದಿನೇಶ್ ಯಾದವ್ ಅವರ ಪುತ್ರಿ ಡಾ.ಇಶಿತಾ ಯಾದವ್ ಅವರೊಂದಿಗೆ ನಡೆಯಿತು. ಎಲ್ಲಾ ಹಿರಿಯರು ಆಶೀರ್ವದಿಸಿದರು ಎಂದು ಬರೆದುಕೊಂಡಿದ್ದಾರೆ.




