ಬೆಂಗಳೂರು : ದೆಹಲಿಗೆ ನನ್ನನ್ನು ಹೈಕಮಾಂಡ್ ಕರೆದಿಲ್ಲ, ಕರೆದರೆ ನಾನು ಹೋಗುತ್ತೇನೆ ಎಂದು ಗ್ರಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಯಾಕೆ ಹೋಗಿದ್ದಾರೆ ಎಂಬುದು ತಿಳಿದಿಲ್ಲ.ಕಾಲ್ತುಳಿತ ದುರಂತದ ಬಗ್ಗೆ ಮಾಹಿತಿ ನೀಡಲು ಅವರು ಹೋಗಿರಬಹುದು. ಪಕ್ಷದ ಹೈಕಮಾಂಡ್ ನನಗೆ ಕರೆ ಮಾಡಿಲ್ಲ, ಅವರು ಕರೆ ಮಾಡಿದರೆ ನಾನು ಕೂಡ ಹೋಗೇನೆ ಎಂದರು.
ಕಾಲ್ತುಳಿತ ದುರಂತದ ಬಗ್ಗೆ, ನಿನ್ನೆ ಸಭೆ ನಡೆಸಲಾಗಿದೆ, ಕಾಲ್ತುಳಿತ ದುರಂತದಲ್ಲಿ 11 ಜನರು ಸಾವು ಪ್ರಕರಣದ ಬಗ್ಗೆ ವಾಸ್ತವ ಸಂಗತಿ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುತ್ತೇವೆ, ಸರ್ಕಾರದ ಪರ ಏನು ತಿಳಿಸಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದೇವೆ ಎಂದರು.




