Ad imageAd image

ಬಡತನ ನಿರ್ಮೂಲನೆ: ಭಾರತದಲ್ಲಿ ಗಮನಾರ್ಹ ಪ್ರಗತಿ

Bharath Vaibhav
ಬಡತನ ನಿರ್ಮೂಲನೆ: ಭಾರತದಲ್ಲಿ ಗಮನಾರ್ಹ ಪ್ರಗತಿ
WhatsApp Group Join Now
Telegram Group Join Now

ನವದೆಹಲಿಭಾರತದಲ್ಲಿ ಬಡತನವು ಕಡಿಮೆಯಾಗುತ್ತಿದೆ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. 2024ರಲ್ಲಿ ಈ ಪ್ರಮಾಣ ಶೇ 4.6ಕ್ಕೆ ಇಳಿಕೆಯಾಗಿರುವ ಸಾಧ್ಯತೆ ಇದೆ ಎಂದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ವರದಿ ಅಂದಾಜಿಸಿದೆ.

2023 ರಲ್ಲಿ ವಿಶ್ವಬ್ಯಾಂಕ್ ಅಂದಾಜು ಮಾಡಿದ್ದ ಶೇಕಡಾ 5.3 ರ ಬಡತನದ ದರಕ್ಕಿಂತ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ವಿಶ್ವಬ್ಯಾಂಕ್​ ಮತ್ತು ಎಸ್​ಬಿಐನ ಬಡತನದ ಅಂದಾಜುಗಳಲ್ಲಿ ಗಮನಾರ್ಹ ಇಳಿಕೆ ಕಂಡಿರುವುದು ಗೊತ್ತಾಗಿದೆ. ವಿಶ್ವಬ್ಯಾಂಕ್​ ಅಂದಾಜಿಸಿದಂತೆ ಭಾರತದಲ್ಲಿ ಬಡತನ ಪ್ರಮಾಣ 2023ರಲ್ಲಿದ್ದ ಶೇ 5.3ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿತ್ತು.

ಭಾರತವು ಬಡತನ ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಅಲ್ಲದೇ, ಇತ್ತೀಚಿನ ಅಂದಾಜಿನ ಪ್ರಕಾರ ವಿಶ್ವಬ್ಯಾಂಕ್‌ನ ಮೌಲ್ಯಮಾಪನಕ್ಕಿಂತ ಈ ಪ್ರಮಾಣ ಮತ್ತಷ್ಟು ಕುಸಿತ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಈ ವರದಿಯಲ್ಲಿ ಬಡತನದಲ್ಲಿನ ಇಳಿಕೆಗೆ ದತ್ತಾಂಶ ಸಂಗ್ರಹಣೆಯ ಹೊಸ ವಿಧಾನಗಳು ಮತ್ತು ನವೀಕರಿಸಿದ ವ್ಯಾಖ್ಯಾನಗಳು ಹೆಚ್ಚಿನ ಬೆಂಬಲವನ್ನು ನೀಡಿವೆ. ಭಾರತದ ಇತ್ತೀಚಿನ ಗೃಹಬಳಕೆ ವೆಚ್ಚ ಸಮೀಕ್ಷೆಗೆ ಹಳೆಯ ಏಕರೂಪ ಉಲ್ಲೇಖ ಅವಧಿ ಬದಲಿಗೆ ಮಾರ್ಪಡಿಸಿದ ಮಿಶ್ರ ಮರುಸ್ಥಾಪನೆ ಅವಧಿ ವಿಧಾನವನ್ನು ಅಳವಡಿಸಿಕೊಂಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!