ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ವ್ಯಾಪ್ತಿಗೆ ಬರುವ ಅನುದಾನಿತ ಸರ್ವೋದಯ ವಿನೋಬಾ ಪ್ರೌಢ ಪೀಣ್ಯ 2ನೇ ಹಂತ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಾರ್ಥ್ ನಗರ ಈ ಎರಡು ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡಿದ ಶಿಕ್ಷಣ ಕ್ಷೇತ್ರದಲ್ಲಿ ಅಂದರೆ ಸರ್ವೋದಯ ವಿನೋಬಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜೆ.ಎಂ.ದೇಶಯ ಅವರು ಬಡ ವಿದ್ಯಾರ್ಥಿಗಳೆಂದರೆ ತುಂಬಾ ಪ್ರೀತಿಯುಳ್ಳ ವ್ಯಕ್ತಿ ಎಂದರೆ ತಪ್ಪಾಗಲಾರದು.
ಅವರು ತಮ್ಮ ದುಡಿಮೆಯ ಸಂಭಾವನೆ ಯಲ್ಲಿ ಬಡ ವಿದ್ಯಾರ್ಥಿಗಳಿಗೆ ಪೆನ್ನು, ಪೆನ್ಸಿಲ್, ಪುಸ್ತಕ ಇಲ್ಲದೆ ಇರುವ ವಿದ್ಯಾರ್ಥಿಗಳನ್ನು ಕಂಡು ಬಂದಲ್ಲಿ ಅದನ್ನು ಪೊರೈಸುವ ಮನೋಭಾವನೆ ಶಿಕ್ಷಕರಲ್ಲಿ ಯಾರಾದರೂ ಇದ್ದರೆ ಜೆ.ಎಂ.ದೇಶಯ ಮುಖ್ಯ ಗುರುಗಳು ಎಂದು ಘಂಟಾಘೋಷವಾಗಿ ಹೇಳಬಹುದು.
ಅದರಂತೆ ಸರ್ವೋದಯ ವಿನೋಬಾ ಪ್ರೌಢ ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಸುಮಾರು 20ರಿಂದ25 ಸಾವಿರ ರೂಪಾಯಿಗಳ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿದ್ದಾರೆ.
ಸರ್ವೋದಯ ವಿನೋಬಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜೆ.ಎಂ. ದೇಶಯ ಅವರಿಗೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡಲು ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಭಗವಂತ ಶಕ್ತಿ ನೀಡಿ ವಿದ್ಯಾರ್ಥಿಗಳ ಸೇವೆ ಮಾಡಲು ಕರುಣೆಸಲಿ ಎಂದು ಶಿಕ್ಷಕ ಶಿಕ್ಷಕಿಯರು ಮತ್ತು ಪೊಷಕರು ಆಪ್ತ ಸಾರ್ವಜನಿಕರ ಆಶಾದಾಯಕವಿಗಿದೆ ಎಂದರು.
ವರದಿ: ಅಯ್ಯಣ್ಣ ಮಾಸ್ಟರ್




