ಬಸವನ ಬಾಗೇವಾಡಿ :ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಂಬವ ಯುವ ಸೇನೆಯ ಜಿಲ್ಲಾ ಅಧ್ಯಕ್ಷರ ಸನ್ಮಾನ ಹಾಗೂ ತಾಲೂಕಾ ಪದಾಧಿಕಾರಿಗಳ ಆಯ್ಕೆ ಸಭೆಯ ಜರುಗಿತು.
ಕಲ್ಲು ಸೊನ್ನದ ಮಾತನಾಡುತ್ತಾ ಸಂಘಟನೆಯನ್ನು ಜಿಲ್ಲಾ ಮಟ್ಟದಲ್ಲಿ ಎಲ್ಲರೂ ಸೇರಿ ಮುನ್ನಡಿಸಿಕೊಂಡು ಹೋಗುವಂತೆ ಮತ್ತು ನನ್ನಿಂದ ಏನೇ ಸಹಾಯ ಸಹಕಾರ ಬೇಕೆಂದರೂ ಮಾಡುತ್ತೇನೆ ಅಂತ ಹೇಳಿದರು.

ಜಾಂಬವ ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ನಂದಿ ಸಂಘಟನೆಯನ್ನು ಉದ್ದೇಶಿಸಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಮಯದಲ್ಲಿ ತಾಲೂಕ ಅಧ್ಯಕ್ಷರಾದ ಬಸವರಾಜ್ ಅಂಬೇಡ್ಕರ್ ಕಾರ್ಯದರ್ಶಿ ಮಂಜುನಾಥ್ ಮ್ಯಾಗೇರಿ ಯಮನಪ್ಪ ಮ್ಯಾಗೇರಿ, , ಅಶೋಕ ಭಜಂತ್ರಿ, ತಾಯಪ್ಪ ಮ್ಯಾಗೇರಿ, ಕನಕೇಶ ಬಾಗೇವಾಡಿ, ಅಯ್ಯಪ್ಪ ಮ್ಯಾಗೇರಿ, ದ್ಯಾವಪ್ಪ ಇಂಗಳೇಶ್ವರ, ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.




