ಚಿಟಗುಪ್ಪ: ಪಟ್ಟಣದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಬುಧವಾರ ಜರುಗಿತು.ಪುರಸಭೆ ನೂತನ ಅಧ್ಯಕ್ಷರಾಗಿ ದಿಲೀಪಕುಮಾರ ಬಗದಲಕರ್, ಉಪಾಧ್ಯಕ್ಷರಾಗಿ ನಸೀರ ಖಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗೊತ್ತು ಪಡಿಸಿದ ಚುನಾವಣಾಧಿಕಾರಿ ಮಂಜುನಾಥ ಪಂಚಾಳ ತಿಳಿಸಿದರು.ಪುರಸಭೆ ಮುಖ್ಯಧಿಕಾರಿ ಹುಸಾಮೋದ್ದಿನ ಬಾಬಾ ಇದ್ದರು.ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಪುರಸಭೆ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಸನ್ಮಾನಿಸಿದರು.
ಬಳಿಕ ಪುರಸಭೆಯಿಂದ ಪಟ್ಟಣದ ಬಸವೇಶ್ವರ ವೃತದವರೆಗೆ ಮಾಜಿ ಸಚಿವ ರಾಜಶೇಖರ್ ಪಾಟೀಲ ಅವರಿಗೆ ಕುದರೆ ಮೇಲೆ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು,ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಸಜೀಶ ಲಂಬುನೋರ




