ಬೆಳಗಾವಿ: ಮೂಲಭೂತ ಸೌಕರ್ಯಗಳಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳ ಗೋಳಾಟ
ಮಾಧ್ಯಮದವರು ಪ್ರಶ್ನೆ ಮಾಡಿದರೆ ಹಾಸ್ಟೆಲ್ ಮೇಲ್ವಿಚಾರಕ ರಾಜು ಗುರವ ಮೌನಕ್ಕೆ ಶರಣು.
ಸರ್ಕಾರವು ಕೋಟಿ ಕೋಟಿ ಹಣ ಖರ್ಚು ಮಾಡಿದರು ಸಹ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ ಇದು ವಿಷಾದೀಯ ಸಂಗತಿ
ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಾಕತಿ ಗ್ರಾಮದಲ್ಲಿರುವ ಹಾಸ್ಟೆಲ್ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ: ವಿದ್ಯಾರ್ಥಿಗಳಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡದೆ ಮೌನಕ್ಕೆ ಜಾರಿದ ಮೇಲ್ವಿಚಾರಕರ ರಾಜು ಗುರವ. ತಾಲೂಕು ಅಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು. ನಮಗೆ ಕುಡಿಯಲು ನೀರಿಲ್ಲ ಕೊಳಚೆ ನೀರಿನ ಮಿಸ್ರಿತ ದಿನನಿತ್ಯ ನಾವುಗಳು ಸೇವಿಸುತ್ತಿದ್ದೇವೆ ಹಾಗೆ ತಟ್ಟೆ ಲೋಟ ಹಾಸಿಗೆ ದಿಂಬು ಮೂಲಭೂತ ಸೌಕರ್ಯಗಳನ್ನು ಯಾವುದೂ ಸಹ ನಮಗೆ ಸಿಗುತ್ತಿಲ್ಲ ಎಂದು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು.
ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಅಧಿಕಾರಿ ಶಾಂತವ್ವ ಮರಿಗೌಡರ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿ ಹಾಸ್ಟೆಲ್ ಮೇಲ್ವಿಚಾರಕರನ್ನು ತಕ್ಷಣದಿಂದ ವರ್ಗಾವಣೆ ಮಾಡಿ ಆದೇಶಿಸಿದರು ಇನ್ನು ಮುಂದಾದರೂ ಇಲ್ಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸುತ್ತಾರ ಎಂದು ಕಾದು ನೋಡೋಣ
ವರದಿ: ವಿನೋದ. ಎಂ. ಜೆ.




