ತಮ್ಮ 58 ನೇ ವಯಸ್ಸಿನಲ್ಲಿ ಎಲ್ಲಾ ಆಸ್ತಿ, ಕಂಪನಿ ತ್ಯಾಗ, ಜೈನ ಭಗವತಿ ದೀಕ್ಷೆ
ರಾಯಚೂರು: ರೈತ ಭವನದಲ್ಲಿ ಇಂದು ನಡೆದ ಜೈನ ಭಗವತಿ ದೀಕ್ಷಾ ಕಾರ್ಯಕ್ರಮಕ್ಕೆ
ಮೆರವಣಿಗೆ ಮೂಲಕ ಆಗಮಿಸಿ ಲೌಕಿಕ ಜೀವನಕ್ಕೆ ವಿದಾಯ ಹೇಳಿದ್ದಾರೆ.ಅತ್ಯಂತ ಕಠಿಣ ಆಚರಣೆಯ
ಜೈನ ಭಗವತಿ ದೀಕ್ಷೆ ಪಡೆದು ಜೈನ ಮುನಿಯಾಗಿದ್ದಾರೆ. ಎಂ.ಫಾರ್ಮಾ ಮುಗಿಸಿ ಔಷಧ್ಯೋದ್ಯಮದಲ್ಲಿ ತೊಡಗಿದ್ದ ದಿಲೀಪ್ ಕುಮಾರ್
ಅಲೋಪಥಿಕ್ ಔಷಧ , ಆಯುರ್ವೇದಿಕ್ ಔಷಧಿ ತಯಾರಿಕೆಯಲ್ಲೂ ತೊಡಗಿಸಿಕೊಂಡಿದ್ದ ಉದ್ಯಮಿ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಸುತ್ತಿದ್ದ ಸುಮಾರು ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.
ತಮ್ಮ ಮೂವರು ಹೆಣ್ಣು ಮಕ್ಕಳು, ಕುಟುಂಬಸ್ಥರಿಗೆ ಆಸ್ತಿ ಬಿಟ್ಟು, ಒಂದಷ್ಟು ದಾನ ಮಾಡಿ ಜೈನ ಭಗವತಿ ದೀಕ್ಷೆ ಪಡೆದಿದ್ದಾರೆ. ಜೈನ ದೀಕ್ಷೆ ಪಡೆದ ಬಳಿಕ ಎಷ್ಟೇ ದೂರದ ಪ್ರಯಾಣವಿದ್ದರೂ ವಾಹನ ಬಳಸುವ ಆಗಿಲ್ಲ. ವಿದ್ಯುತ್ ಲೈಟ್, ಮೊಬೈಲ್, ಫ್ಯಾನ್, ಎಸಿ, ಟಿವಿ ಯಾವೂದನ್ನೂ ಬಳಸುವಂತಿಲ್ಲ. ಸೂರ್ಯಾಸ್ತದ ನಂತರ ಕತ್ತಲಲ್ಲೆ ಕಾಲ ಕಳೆಯಬೇಕು ಹೀಗೆ ಸಾಕಷ್ಟು ಕಠಿಣ ನಿಯಮ ಪಾಲನೆ ಹಿನ್ನೆಲೆ ಜೈನ್ ಭಗವತಿ ದೀಕ್ಷೆ ವಿಶಿಷ್ಟತೆಯನ್ನ ಪಡೆದಿದೆ.- ದಿಲೀಪ್ ಕುಮಾರ್ ಧೋಕಾ, ಜೈನ ದೀಕ್ಷೆ ಪಡೆದ ಉದ್ಯಮ ಕಮಲ್ ಕುಮಾರ್ ಇವರು ಜೈನ್ ಸಮುದಾಯ ಮುಖಂಡರು.
ವರದಿ: ಗಾರಲ ದಿನ್ನಿ ವೀರನ ಗೌಡ




