ಇಳಕಲ್ಲ : ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ರೈತರು ಎತ್ತುಗಳನ್ನು ಶೃಂಗರಿಸಿ ಕರಿ ಹರಿಯುವ ಮೂಲಕ ಸಂಭ್ರಮಿಸಿದರು.
ಕಂದಗಲ್ಲ : ಕಾರುಹುಣ್ಣಿಮೆ ಅಂಗವಾಗಿ ಗ್ರಾಮದ ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿ ಅವುಗಳಿಗೆ ಇಷ್ಟವಾದ ಆಹಾರ ನೀಡಿ ಸಾಯಂಕಾಲದ ಸಮಯದಲ್ಲಿ ಕಾರಹುಣ್ಣಿಮೆಯನ್ನು ಸಡಗರ ಸಂಭ್ರಮದಿoದ ಆಚರಿಸುವ ಮೂಲಕ ಕರಿಹರಿದು ರೈತರು ಸಂಭ್ರಮಪಟ್ಟರು.
ಗ್ರಾಮದ ಅಗಸಿ ಬಾಗಿಲಿನ ಗುಡ್ಡೆಕಲ್ಲಿಗೆ ಮತ್ತು ಎತ್ತುಗಳಿಗೆ ಪೂಜೆ ಸಲ್ಲಿಸಿ ನಂತರ ಅಗಸಿಬಾಗಿಲಿಗೆ ಕರಿಯನ್ನು ಕಟ್ಟಿ ಎತ್ತುಗಳನ್ನು ಓಡಿಸುತ್ತಾ ಬಂದು ಕರಿ ಹರಿದು ಸಂಭ್ರಮಿಸಿದರು.
ಗ್ರಾಮದ ಪ್ರಗತಿಪರ ರೈತರಾದ ಚನ್ನಪ್ಪಗೌಡ ನಾಡಗೌಡ್ರ ಅವರ ಸುಪುತ್ರ ರಾಹುಲ ನಾಡಗೌಡ, ಹಿರಿಯರಾದ ಚನ್ನಪ್ಪ ಜಾಲಿಹಾಳ, ಬಸಟೆಪ್ಪ ಸಜ್ಜನ, ರುದ್ರಗೌಡ ಪಾಟೀಲ, ವೀರೇಶ ಸಿಂಪಿ, ಗುರು ಗಾಣಿಗೇರ ಸೇರಿದಂತೆ ಗ್ರಾಮದ ರೈತರು ಹಿರಿಯರು ಯುವಕರು ಮಕ್ಕಳು ಸೇರಿದಂತೆ ಮಹಿಳೆಯರುಹಬ್ಬಕ್ಕೆ ಸಾಕ್ಷಿಯಾದರು.
ವರದಿ : ದಾವಲ್ ಶೇಡಂ




