ಲಾಡ್ಸ್ ( ಲಂಡನ್): ಇಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಎರಡನೇ ದಿನದ ಆಟದಲ್ಲಿಯೂ ತರೆಗೆಲೆಯಂತೆ ವಿಕೆಟ್ ಗಳು ಉರುಳಿದವು. ಇದರ ಪರಿಣಾಮವಾಗಿ ಪಂದ್ಯ 2 ನೇ ದಿನವೇ ಪಂದ್ಯದ ಮೂರನೇ ಇನ್ನಿಂಗ್ಸ್ ಕೂಡ ಮುಗಿಯುವ ಹಂತಕ್ಕೆ ಬಂದಿದೆ.
ಕ್ರಿಕೆಟ್ ಕಾಸಿ ಲಾಡ್ಸ್ ಮೈದಾನದಲ್ಲಿ ಎರಡನೇ ದಿನದಾಟ ಮುಗಿದಾಗ ಆಸ್ಟ್ರೇಲಿಯಾ ತನ್ನ ದ್ವಿತೀಯ ಸರದಿಯಲ್ಲಿ8 ವಿಕೆಟ್ ಗೆ 144 ರನ್ ಗಳಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ಪಂದ್ಯದಲ್ಲಿ ಒಟ್ಟಾರೆ 218 ರನ್ ಗಳ ಮುನ್ನಡೆ ಸಾಧಿಸಿದೆ. ಇದಕ್ಕೆ ಮುನ್ನ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ 138 ರನ್ ಗೆ ಆಲೌಟ್ ಆಯಿತು. ಇದರೊಂದಿಗೆ ಆಸ್ಟ್ರೇಲಿಯಾಗೆ 74 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 212
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 138
ಬೆಡಿಗಾಮ್ 45 ( 111 ಎಸೆತ, 6 ಬೌಂಡರಿ), ಬವುಮಾ 36 ( 84 ಎಸೆತ, 4 ಬೌಂಡರಿ, 1 ಸಿಕ್ಸರ್)
ಪ್ಯಾಟ್ ಕಮ್ಮಿನ್ಸ್ 26 ಕ್ಕೆ 6
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ 8 ವಿಕೆಟ್ ಗೆ 144
( ಅಲೆಕ್ಸ್ ಕ್ಯಾರಿ 43 ( 50 ಎಸೆತ, 5 ಬೌಂಡರಿ) ಲುಂಗಿ ಗಿಡಿ 35 ಕ್ಕೆ 3
ರಬಾಡಾ 44 ಕ್ಕೆ 3)




