ಸಿಂಧನೂರು : ಜೂನ್ 13, ಸರ್ಕಾರದ ಮೃಧು ಧೋರಣೆಯಿಂದ ಗೋಡನ್ ಅಧಿಕಾರಿಗಳ ಹಣದ ದುರಾಸೆಗೆ ಇಳಿದಿದ್ದಾರೆ ಅಧಿಕಾರಿಗಳ ಕೈ ಬಿಸಿ ಮಾಡಿದರೆ ಮಾತ್ರ ಜೋಳ ಖರೀದಿ ಮತ್ತು ಸಂಗ್ರಹಣೆ ಬೇಗ ಆಗುತ್ತದೆ ಎಂದು ಟಿ ಯು ಸಿ ಐ.
ಜಿಲ್ಲಾಧ್ಯಕ್ಷ ಬಿ ಎನ್. ಯರದಿಹಾಳ ಆರೋಪಿದ್ದಾರೆನಂತರ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮೀನ್ ಪಾಷ ದಿದ್ದಗಿ ಮಾತನಾಡಿ, ತಾಲೂಕಿನ ಇನ್ನಿತರ ಭಾಗಗಳಿಂದ ಜೋಳ ತುಂಬಿದ 8 ಲಾರಿಗಳು ಕಂಪ್ಲಿ ಹಾಗೂ ವಡ್ಡರಟ್ಟಿ ಗೊಡಾನ್ ಗೆ ತೆಗೆದುಕೊಂಡು ಹೋದರೆ ಟಿ ಎ ಪಿ ಸಿ ಎಂ ಸಿ. ಕೆಲವು ರೈತರ ಜೋಳ ತೂಕ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಕೆ ಆರ್ ಎಸ್, ಟಿ ಯು ಸಿ ಐ, ಕಾರ್ಯಕರ್ತರು ಒತ್ತಾಯಿಸಿದ ನಂತರ ತೂಕ ಮಾಡಿ ಜೋಳ ಖರೀದಿಸಲಾಗಿದೆ ಎಂದರು ಗೋಡನ್ ಅಧಿಕಾರಿಗಳ ಹಠಮಾರಿ ಧೋರಣೆ ಖಂಡಿಸಿ ರೈತರು ನಗರದ ತಹಸಿಲ್ದಾರ್ ಅರುಣ್ ಕುಮಾರ್ ದೇಸಾಯಿ ಅವರೊಂದಿಗೆ ಚರ್ಚಿಸಿ
ವಲ್ಕಂದಿನ್ನಿ ಸೊಸೈಟಿ ಗೆ ತೆರಳಿ ಎಂಡಿ. ಕಾರ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ. ರೈತ ಸಂಘ ರಾಜ್ಯ ಕಾರ್ಯದರ್ಶಿ ಅಮೀನ್ ಪಾಷ ದಿದ್ದಿಗಿ. ಬೆಳೆ ಕೃಷಿ ಬೆಲೆ ಆಯೋಗದ ಸದಸ್ಯ ಡಿ ಎಚ್. ಪೂಜಾರಿ. ಬಸವರಾಜ ಗೊಂಡಿಹಾಳ. ಬಿ ಎನ್. ಯಾರದಿಹಾಳ. ಬಸವಂತರಾಯಗೌಡ ಕಲ್ಲೂರು. ಬಸವರಾಜ ಹಂಚಿನಾಳ. ಚನ್ನಬಸನಗೌಡ ಬನ್ನಿಗನೂರು. ಬಸವರಾಜ್ ಬನ್ನಿಗನೂರು. ರಮೇಶ್ ಪಾಟೀಲ್ ಬೇರಿಗಿ. ಇನ್ನಿತರ ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ




