ಹುಮನಾಬಾದ : ಎತ್ತುಗಳು ರೈತರ ಜೀವನಾಡಿಯಾಗಿವೆ ಎಂದು ಯುವ ಮುಖಂಡ ರುದ್ರಮಣಿ ಖ್ಯಾಲಪ್ ತಿಳಿಸಿದರು.ತಾಲ್ಲೂಕಿನ ಬೋರಂಪಳ್ಳಿ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ಯ ಇತ್ತುಗಳ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ ಹುಣ್ಣಿಮೆ ದಿನದಂದು ಎತ್ತುಗಳಿಗೆ ಸಿಂಗಾರ ಮಾಡಿ ಹಬ್ಬ ಆಚರಿಸಿ ರೈತರು ಸಂಭ್ರಮದಿಂದ ಇತ್ತುಗಳ ಮೆರವಣಿಗೆ ಮಾಡುತ್ತಾರೆ.ರೈತರು ತಮ್ಮ ಎತ್ತು,ಹಸುಗಳಿಗೆ ಹಳ್ಳದಲ್ಲಿ ಮಾಡಿಸಿ ವಿವಿಧ ಬಗೆಯ ಅಲಂಕಾರ ಮಾಡುತ್ತಾರೆ.ರೈತರ ಜೀವನಾಡಿಯಾಗಿರುವ ಎತ್ತುಗಳ ತಲೆಗೆ ಹೂವಿನ ಗೊಂಡೆ,ಕೊರಳಿಗೆ ಗೆಜ್ಜೆ,ಟೊಂಕಕ್ಕೆ ಕಪ್ಪುದಾರ,ಕೋಡಿಗೆ ಬಣ್ಣ,ದೇಹಕ್ಕೆ ಕೆಂಪು, ಹಳದಿ ಬಣ್ಣ ಹಚ್ಚಿ ಶೃಂಗಾರಗೊಳಿಸುತ್ತಾರೆ ಎಂದು ಹೇಳಿದರು.
ಬಳಿಕ ಗ್ರಾಮದ ರಸ್ತೆಗಳಲ್ಲಿ ಇತ್ತುಗಳ ಮೆರವಣಿಗೆ ಮಾಡಿ ರೈತರು,ಊರಿನ ಮುಖಂಡರು ಸಂಭ್ರಮಿಸಿದರು.ಸಂಜೆ ಸಮಯದಲ್ಲಿ ರೈತರು ತಮ್ಮ ನೆಚ್ಚಿನ ಎತ್ತುಗಳಿಂದ ಕರಿ ಹರಿಯುವ ಸಂದರ್ಭದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಅಣ್ಣಾರಾವ, ಖಾಲಪ್ಪ,ಸುರೇಶ ವೀರಣ್ಣ ದೇವಣಿ, ಶಿವಲಿಂಗಪ್ಪ ಎರಬಾಗ,ಶರಣಪ್ಪ ಜನವಾಡ, ವೀರೇಶ ಜನವಾಡ,ಅಪ್ಪಾರಾವ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ,ವೀರೇಶ ಚೆಟ್ಟಿ, ಬಸವರಾಜ ಹಾರಕೂಡ,ಶರಣಪ್ಪ ಖ್ಯಾಲಪ್, ಮಲ್ಲಿಕಾರ್ಜುನ ಪ್ರಕಾಶ ಖ್ಯಾಲಪ್,ಪ್ರದೀಪ ಬಿರಾದಾರ ಸೇರಿ ರೈತರು,ಯುವಕು ಗಣ್ಯರು ಭಾಗಿಯಾಗಿದ್ದರು.
ವರದಿ : ಸಜೀಶ ಲಂಬುನೋರ




