Ad imageAd image

ಕೆ ಆರ್. ಇ.ಎಸ್ ಶಿಕ್ಷಣ ಸಂಸ್ಥೆಯ 101ನೇ ಸಂಸ್ಥಾಪನಾ  ದಿನಾಚರಣೆ

Bharath Vaibhav
ಕೆ ಆರ್. ಇ.ಎಸ್ ಶಿಕ್ಷಣ ಸಂಸ್ಥೆಯ 101ನೇ ಸಂಸ್ಥಾಪನಾ  ದಿನಾಚರಣೆ
WhatsApp Group Join Now
Telegram Group Join Now

ಕಾಗವಾಡ: ಗುರು-ಶಿಷ್ಯ ಸಂಬಂಧ  ಎಲ್ಲಿ ಒಂದೇ  ಇರುತ್ತದೆ  ಅಲ್ಲಿ ನಿಂತರ  ಜ್ಞಾನದ ಗಂಗೆ ಹರಿಯುತ್ತದೆ ಎಂದು ಐನಾಪುರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ  ನುಡಿದರು.
ಅವರು ತಾಲೂಕಿನ ಐನಾಪುರ ಪಟ್ಟಣದಲ್ಲಿ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ ಕೆ ಆರ್. ಇ.ಎಸ್ ಶಿಕ್ಷಣ ಸಂಸ್ಥೆಯ 101ನೇ ಸಂಸ್ಥಾಪನಾ  ದಿನಾಚರಣೆ ಆಚರಿಸಿ.2024-25ಸಾಲಿನ ಎಸ್ ಎಸ್ ಎಲ್ ಸಿ   ಹಾಗೂ ದ್ವೀತಿಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸತ್ಕಾರ ಸಮಾರಂಭವನ್ನು ಶ್ರೀ ಶಾರದಾದೇವಿ ಭಾವಚಿತ್ರಕ್ಕೆ ಪೂಜೆ ಸಲಿಸುವ ಮೂಲಕ ಉದ್ಘಾಟಿಸಿ. ಆರ್ಶಿವಚನ ನೀಡಿದ ಅವರು ಶಾಲೆಯಲ್ಲಿ ಜ್ಞಾನದ ಜೊತೆಗೆ ಆಟ, ಪಾಠ, ನೋಟ,ದೊಂದಿಗೆ  ಬದುಕು ಕಟ್ಟಿಕೊಳ್ಳುವ ಜ್ಞಾನವನ್ನು ಗುರು ಗಳು ನೀಡುತ್ತಾರೆ  ಎಂದರು.
ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ ಎಲ್ಲಾ ವೃತ್ತಿಗೂ ಮೂಲ ಆಗಿರುವುದರೊಂದಿಗೆ ಉತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಶಕ್ತಿ ಇರುವುದು ಈ ವೃತ್ತಿಗೆ ಮಾತ್ರ. ಒಂದು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳ ಪಾತ್ರವೂ ಮಹತ್ತರವಾದುದು ಎಂದ ಅವರು ಜ್ಞಾನಕ್ಕಿಂತ ಉದ್ಯೋಗಕ್ಕಾಗಿಯೇ ಶಿಕ್ಷಣ ಬೇಕು  ಎನ್ನುವ ಸನ್ನಿವೇಶದಲ್ಲಿ ಕೆ ಆರ್ ಇ ಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ  ಜಿ ಎಂ ದೇಶಪಾಂಡೆ ಗುರುಗಳ ಉನ್ನತ ಹುದ್ದೆಗಳನ್ನು ತ್ಯಜಿಸಿ ಸ್ವತಃ ಶಿಕ್ಷಕರಾಗಿ ಹಳ್ಳಿಗಳಿಂದ ಮಕ್ಕಳನ್ನು ಕರೆತಂದು ಶಿಕ್ಷಣ ನೀಡಲಾರಂಭಿಸಿ ಕೆ ಆರ್ ಇಎಸ್ ಸಂಸ್ಥೆ ಸ್ಥಾಪಿಸಿ ಬಡಮಕ್ಕಳಿಗೆ  ಶಿಕ್ಷಣ ನೀಡದ ಮಹಾನ ಚೇತನರು ಎಂದರು. ಇಸಂದರ್ಭದಲ್ಲಿ ಸನ್2024-25ಸಾಲಿನ ಎಸ್ ಎಸ್ ಎಲ್ ಸಿ   ಹಾಗೂ ದ್ವೀತಿಯ ಪಿಯುಸಿ  ಪರೀಕ್ಷೆ ಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಪ್ರತಿಭಾ ಪುರಸ್ಕಾರ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಪೋತದಾರ ಅಧ್ಯಕ್ಷತೆ , ವಹಿಸಿದರು.
ಸಂಸ್ಥೆಯ ನಿರ್ದೇಶಕ ಸಂಜು ಭಿರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂದರ್ಭದಲ್ಲಿ ಸಂಸ್ಥೆ ನಿರ್ದೇಶಕರಾದ ,ಉದಯ ನಿಡಗುಂದಿ,  ದಿವಾಕರ ಮುದಕವಿ ಪ್ರಾಚಾರ್ಯರಾದ ಡಾ.ಬಿ.ಪ್ರೇಮಾನಂದ,ಎಸ್.ಎಂ ಸೋಂದಕರ,ಎಸ್ ಎಸ್ ಚೌಗಲಾ ಶಿವಶಂಕರ ಕುಂಬಾರ,   ಪುಷ್ಪಾ ದೇಶಪಾಂಡೆ, ಗುರು ದೇಶಪಾಂಡೆ ,ಹಾಗೂ,ಸಂಸ್ಥೆ ಯ ಎಲ್ಲ ಸದಸ್ಯರು ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಇತರರು ಇದರು.
ಉಪ್ರಾಚಾರ್ಯರಾದ  ಎ.ಎಂ.ಹುಲ್ಲೆನ್ನವರ ಸ್ವಾಗತಿಸಿದರು. ಶಿಕ್ಷಕರಾದ ಎ ಎಸ್ ನಾಯಿಕ  ನಿರೂಪಿಸಿದರು. ಶಿಕ್ಷಕಯರಾದ  ಎಸ್ ಎಂ ತಳಕೇರಿ ವಂದಿಸಿದರು.

ವರದಿ: ಚಂದ್ರಕಾಂತ ಕಾಂಬಳೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!