——————————ವಿಶ್ವ ಯೋಗದಿನದ ನಿಮಿತ್ಯ ಜಾಗೃತಿ ಕಾರ್ಯಕ್ರಮ|| ಯೋಗದಿಂದ ನಿರೋಗಿ ಜೀವನ||
ಭಾಲ್ಕಿ : ಜಗತ್ತಿಗೆ ಮಾನವೀಯ ಮೌಲ್ಯ ತೋರಿಸಿದ್ದು ಭಾರತ ದೇಶವಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು ಪ್ರತಿಪಾದಿಸಿದರು.

ಪಟ್ಟಣದ ಕಲ್ಯಾಣಿ ಬಡಾವಣೆಯ ಷಣ್ಮುಖಪ್ಪ ಕಲ್ಯಾಣ ಮಂಟಪದಲ್ಲಿ ಅಂತರಾಸ್ಟ್ರಿಯ ಯೋಗದಿನ ೨೦೨೫ ನಿಮಿತ್ಯ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗದ ಸದುದ್ದೇಶದಿಂದ ವಿಶ್ವವಾಹಿನಿ ಶಿಕ್ಷಣ ಸಂಸ್ಥೆಯ ಆಯೋಜತ್ವದಲ್ಲಿ, ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ ಇನ್ ಯೋಗ್ ಮತ್ತು ನ್ಯಾಚುರೋಪತಿ, ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಹಾಗೂ ಜೈ ಗುರುದೇವ ಯೋಗ ಟ್ರಸ್ಟ್ (ರಿ.) ಭಾಲ್ಕಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಾಮಯೋಗ ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಇಂದು ಪ್ರಪಂಚವು ಭಾರತದತ್ತ ನೋಡುವಂತಾಗಿದೆ. ಪ್ರಾಚೀನ ಕಾಲದಿಂದಲೂ ಭಾರತ ಸುಸಂಸ್ಕೃತ ರಾಷ್ಟ್ರ, ನಮ್ಮ ಹಿಂದಿನ ಋಷಿಮುನಿಗಳು ಯೋಗ, ಧ್ಯಾನದಿಂದ ಜಗದ್ಗುರುಗಳಾಗಿ ಹೊರಹೊಮ್ಮಿದ್ದಾರೆ. ವಿಶ್ವಕ್ಕೆ ಮಾನವೀಯ ಮೌಲ್ಯ ತೋರಿಸಿ ಕೊಟ್ಟದ್ದು ಭಾರತದೇಶವಾಗಿದೆ. ಯೋಗದಿಂದ ನಿರೋಗಿ ಜೀವನ ಸಾಧಿಸಲು ಸಾಧ್ಯ ಎಂದು ಜಗತ್ತಿಗೆ ಸಾರಿ ಹೇಳಿದ ದೇಶ ನಮ್ಮದು ಎಂದು ಹೇಳಿದರು.

ವಿವೇಕವಾಹಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗು ಐಎನ್ಓ ತಾಲೂಕು ಸಂಚಾಲಕ ಈಶ್ವರ ರುಮ್ಮಾ ನೇತೃತ್ವ ವಹಿಸಿ ಮಾತನಾಡಿ, ಇದೇ ಜೂನ್ ೨೧ ರಂದು ನಡೆಯಲಿರುವ ಅಂತರ ರಾಷ್ಟಿçÃಯ ಯೋಗ ದಿನದ ನಿಮಿತ್ಯ ಜಗತ್ತಿನಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಐಎನ್ಓ ಸಹಯೋಗದಲ್ಲಿ ಯೋಗ ತರಬೇತಿ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಅಡ್ಡ ಪರಿಣಾಮವಿದಲ್ಲದೇ ಯೋಗದಿಂದ ಎಲ್ಲಾ ಕಾಯಿಲೆಗಳು ವಾಸಿ ಮಾಡಿಕೊಳ್ಳಬಹುದು. ಯೋಗದಿಂದ ನರೋಗಿ ಜೀವನ ಸಾಗಿಸಬಹುದು ಎಂದು ಹೇಳಿದರು. ಐಎನ್ಓ ಜಿಲ್ಲಾ ಉಪಾಧ್ಯಕ್ಷ ಹಾಗು ಯೋಗ ಗುರು ಹರಿದೇವ ರುದ್ರಮಣಿ ಯೋಗ ತರಬೇತಿ ನೀಡಿದರು.
ಜೈ ಗುರುದೇವ ಯೋಗ ಟ್ರಸ್ಟಿನ ಯೋಗ ಪಟುಗಳು ಅನೇಕ ಭಂಗಿಯ ಯೋಗ ಪ್ರದರ್ಶನ ಮಾಡಿದರು.
ವಿಶೇಷ ಉಪನ್ಯಾಸ ಮಂಡಿಸಿದ ಬಿಎನ್ಎಸ್ವಾಯ್ ಕಲಬುರಗಿಯ ಡಾ| ರಿಷಿಕೇಶ ಗೂಗಳೆ, ಬಿಎನ್ವಾಯ್ಎಸ್ ಕೂಡ ಎಮ್ಬಿಬಿಎಸ್ ಪದವಿಯಂತೆ ಒಂದು ಉತ್ತಮ ಪದವಿಯಾಗಿದೆ. ಹೆಚ್ಚಿನ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಬಿಎನ್ಎಸ್ವಾಯ್ ಎಂದರೆ ಬ್ಯಾಚಿಲರ್ ಆಫ್ ನ್ಯಾಚುರೋಪತಿ ಯೋಗಾಸಾಯಿನ್ಸ್, ಪಿಯುಸಿ ನಂತರ ನಾಲ್ಕು ವರ್ಷದ ಪದವಿ ಇದಾದಿಗೆ. ಹೆಚ್ಚಿನ ವಿದ್ಯಾರ್ಥಿಗಳು ಈ ಪದವಿ ಪಡೆದು ಉತ್ತಮ ವೈದ್ಯರಾಗಬಹುದು ಎಂದು ಮಾಹಿತಿ ನೀಡಿದರು. ಇದೇವೇಳೆ ಯೋಗಪಟು ಹುಮ್ನಾಬಾದ ತಾಲೂಕಿನ ಮೊಳಕೆರಾ ಗ್ರಾಮದ ಆನಂದ, ಪಟ್ಟಣದ ಗೌರಿ ಓಂಪಾಟೀಲ ಮತ್ತು ಮಂಗಲಾ ಕಾಡೋದೆಯವರಿಂದ ಯೋಗ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸೂರ್ಯಕಾಂತ ಮಲ್ಲಾಸೂರೆ, ಜೈರಾಜ ದಾಬಶೆಟ್ಟಿ, ಸಂಗಮೇಶ ಗಾಮಾ, ಜಯಕಿಶನ ಬಿಯಾನಿ, ಐಎನ್ಓ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ, ಗೋರಖನಾಥ ಕುಂಬಾರ, ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ಕೇರೂರೆ, ಚಂದ್ರಕಾಂತ ತಳವಾಡೆ, ಯೋಗೇಂದ್ರ ಎದಲಾಪೂರೆ, ಸಂತೋಷ ಪಾಟೀಲ, ಡಾ| ಮಂಜುಳಾ ಮುಚಳಂಬೆ, ಅಮರ ಹಲಮಂಡಗೆ, ಪಂಡಿತ ಪಾಟೀಲ, ವಿಜಯಕುಮಾರ ಸುಲಗುಂಟೆ, ಶರಣಪ್ಪ ಕೊನಗುತ್ತೆ, ಶ್ರೀವಲ್ಲಭ ಹೆಡಾ, ಸುರೇಶ ಸಾವರೇ, ಮಲ್ಲಿಕಾರ್ಜುನ ಕೌಡ್ಗೆ, ಶಿವಕುಮಾರ ಪಾಟೀಲ್, ನೀಲಕಂಠ ಬಿರಾದಾರ, ರಾಜಕುಮಾರ ಬಿರಾದಾರ, ನಿವರ್ತಿ ಯಾದವ, ಶಿವಾನಂದ ಗುಂದಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈಶ್ವರ ರುಮ್ಮಾ ಸ್ವಾಗತಿಸಿದರು. ಗುರುನಾಥ ರಾಜಗೀರಾ ವಂದಿಸಿದರು.
ನಿರೋಗಿಯಾಗಿ ಬಾಳಲು ಯೋಗ ಮುಖ್ಯ ಅಸ್ತçವಾಗಿದೆ. ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ನೀರೋಗಿ ಜೀವನ ಸಾಗಿಸಬೇಕು . – ಶ್ರೀ ಗುರುಬಸವ ಪಟ್ಟದ್ದೇವರು, ಪೀಠಾಧಿಪತಿಗಳು, ಹಿರೇಮಠ ಸಂಸ್ಥಾನ ಭಾಲ್ಕಿ.
ವರದಿ: ಸಂತೋಷ ಬಿ.ಜಿ. ಪಾಟೀಲ




