ಪುನಾ: ಸಮೀಪದ ಮಹಾರಾಷ್ಟ್ರದ ಪುನಾದಲ್ಲಿಯ ಇಂದ್ರಾಯಣಿ ನದಿ ಸೇತುವೆ ಕುಸಿದು 25 ಜನರು ಪ್ರವಾಸಿಗರು ನೀರಿಗೆ ಕೊಚ್ಚಿ ಹೋದ ಘಟನೆ ಇಂದು ಮಧ್ಯಾಹ್ನ 3:30ಕ್ಕೆ ಸಂಭವಿಸಿದೆ.
ರವಿವಾರ ರಜೆಯ ದಿನವಾಗಿದ್ದರಿಂದ ಪೂನಾ ತಳೆಗಾವ್ ಪಟ್ಟಣದ ಪ್ರವಾಸಿ ತಾನ ಕುಂಡಮಾಳದಲ್ಲಿಯ ಇಂದ್ರಾಯನಿ ನದಿಯ ಮೇಲಿನ ಹಳೆಯ ಸೇತುವೆ ರವಿವಾರ ಮಧ್ಯಾಹ್ನ 3:30ಕ್ಕೆ ಕುಸಿದಿ ದ್ದರಿಂದ ಸೇತುವೆ ಮೇಲೆ ನಿಂತಿದ್ದ 25ಕ್ಕೂ ಅಧಿಕ ಪ್ರವಾಸಿಗರು ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಕೆಲ ಮಕ್ಕಳ ಸಮಾವೇಶವಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದು ಮೃತ ಸಂಖ್ಯೆಯಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಘಟನೆಯ ಸ್ಥಳಕ್ಕೆ ಪಿಂಪರಿ ಚಿಂಚವಾಡ ಆಯುಕ್ತಾಲಯದ ತಳೆಗಾವ್ ದಾಭಾಡೆ ಪೋಲಿಸರು ದಾಖಲಾಗಿದ್ದಾರೆ. ಇದೂ ಅಲ್ಲದೆ NDRF ತಂಡ ಅಗ್ನಿಶಾಮಕ ದಳ ದಾಖಲಾಗಿ ನೀರಿಗೆ ಸಿಲುಕಿದ ಪ್ರವಾಸಿಗರನ್ನು ಹೊರತೆಗೆಯುವ ಕಾರ್ಯ ಹಾಗೂ ಶೋಧ ಕಾರ್ಯ ಬರದಿಂದ ಸಾಗಿದೆ.
ಕಳೆದ ನಾಲ್ಕು ದಿನಗಳಿಂದ ಪೂನಾ ಪರಿಸರದಲ್ಲಿ ಭಾರಿ ಮಳೆ ಆಗುತ್ತಿದ್ದು ಇಂದ್ರಯಣಿ ನದಿ ಪ್ರವಾಹವು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿಯೂ ಪ್ರವಾಸಿಗರ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದಕರ ಸಂಗತಿ
ವರದಿ: ಮಹಾವೀರ ಚಿಂಚಣೆ




