ಕಾಳಗಿ: ಶ್ರೀ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆ ಕೊಡದೂರು ವತಿಯಿಂದ ರವಿವಾರ ಮಧ್ಯಾಹ್ನ 3:00ಗಂಟೆಗೆ ಕಾಳಗಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಬಸ್ ನಿಲ್ದಾಣದಲ್ಲಿ ಮುಕುಂದರಾವ್ ಮೂಲಿಮನಿ ಅವರ 5ನೇ ವರ್ಷದ ಪುಣ್ಯ ಸ್ಮರಣೆ ದಿನದ ನಿಮಿತ್ಯ, ವಿಶ್ವ ಜ್ಞಾನಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೊತ್ಸವದ ಅಂಗವಾಗಿ ಮಹಾಪುರುಷರ ಭಾವಚಿತ್ರ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಜಗದೇವ ಟಿ ಗುತ್ತೆದಾರ ಅವರು ಬುದ್ಧ ಬಸವ ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆ ಭಾವ ಚಿತ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಕುಂದರಾವ್ ಮೂಲಿಮನಿ ಅವರು ತಮ್ಮ ಹೋರಾಟದ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವ ಬಗ್ಗೆ ಮತ್ತು ಅವರ ಶಿಕ್ಷಣ ಸಂಸ್ಥೆಗಳ ಕುರಿತು, ಹಾಗೂ ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ಪಕ್ಷ ಮಾಡಿದ ಅನೇಕ ಕಾರ್ಯಯೋಜನೆಗಳ ಕುರಿತು ಮಾತನಾಡಿದರು.

ಇದೆ ವೇಳೆಯಲ್ಲಿ ಮಾತನಾಡಿದ ಅವಿನಾಶ ಕೊಡದೂರ NSUI ತಾಲೂಕ ಅಧ್ಯಕ್ಷ ಹಾಗೂ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಡದೂರ್, ಈ ಸಂದರ್ಭದಲ್ಲಿ :ಮರೆಪ್ಪ ಹಳ್ಳಿ DSS ಸಂಚಾಲಕರು.ಹಾಗೂ ಚಿಂತನ್ ರಾಠೊಡ್, ಮತ್ತು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಶರಣಪ್ಪಾ ಕಮಲಾಪುರ, ಕಾಳಗಿ ತಾಲೂಕು ಪಂಚಗ್ಯಾರಂಟಿ ಅಧ್ಯಕ್ಷರಾದ ರಾಘವೇಂದ್ರ ಡಿ ಗುತ್ತೆದಾರ, ಹಾಗೂ ಅಂಬಯ್ಯ ಗುತ್ತೆದಾರ, ಶಂಕರ್ ಹೆರೂರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಅನಿಲ್ ಜಮಾದಾರ, ಸಂತೊಷ ನರನಾಳ, ಗಣಪತಿ ಹಳಕಾಯಿ, ಕಲ್ಯಾಣರಾವ್ ಡೊಣ್ಣೂರ್, ಶಿವು ಗೊಟೂರ್, ಶಿವಾನಂದ್ ಮಜ್ಜಗಿ, ನಿಂಗಪ್ಪ ಸಾಹುಕಾರ್,ಲಾಲಾಪ್ಪ ಹೊಲ್ಕರ್, ಖತಲಪ್ಪ ಅಂಕನ್,ಮಸ್ತಾನಸಾಬ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ರಾದ ಶರಣು ಮಜ್ಜಗಿ,ಪ್ರಕಾಶ ಶೆಗಾಂವಕರ್ ,ಬಂಡು ಗದ್ದಿ,ಕಾಳಗಿ ಕೊಡ್ಲಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರದಿಪ್ ಡೊಣ್ಣೂರ, ಪುರುಷೋತ್ತಮ ಗುತ್ತೆದಾರ, ರೇವಣಸಿದ್ಧ ಮುಖರಂಭಾ, ರೇವಣಸಿದ್ಧ ಕೇಶ್ವರ್, ಮಾಜಿ ತಾಲೂಕು ಪಂಚಾಯತ ಪ್ರಶಾಂತ್ ರಾಜಾಪುರ. ಮಲ್ಲಪ್ಪ ದಿಂಗವ್. ನಾಗರಾಜ್ ಚಿನ್ನ, ಮಡಿವಾಳ ಗುಂಡಗರ್ತಿ. ಸಂತೋಷ ಹೊಸಳಿ. ಕೃಷ್ಣ ಕೊಡ್ಲಿ. ಸಿದ್ದು ಬುಬಲಿ.ಸಿದ್ದಣ್ಣ ಶೇಟ್ಟಿ .ಅಧ್ಯಕ್ಷರು ಸಂಸ್ಥೆಯ ಕಾರ್ಯದರ್ಶಿ ಅವಿನಾಶ್ ಕೊಡದೂರ್, ಹಾಗೂ ಡಾ. ಶಂಕರ್ ಮೂಲಿಮಾನಿ ಪ್ರಾಧ್ಯಪಕರು CB ಪಾಟೀಲ್ ಚಿಂಚೋಳಿ ಇದ್ದರು.ಶಾಂತಕುಮಾರ್ ಸಾಲಹಳ್ಳಿ ನಿರೂಪಸಿದರು.ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ : ಹಣಮಂತ ಕುಡಹಳ್ಳಿ




