ಅಥಣಿ: ಮಾದಿಗ ಮೀಸಲಾತಿ ಹೋರಾಟ ಸಮೀತಿ ಹಾಗು ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ದಿನಾಂಕ ಜೂನ್18 ರಂದು ಮಧ್ಯಾಹ್ನ 12 ಘಂಟೆಗೆ ಅಥಣಿ ಗಚ್ಚಿನ ಮಠದಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಎಸ್ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ ಮಾರ್ಚ ಏಪ್ರಿಲ್ 2025 ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90% ಹೆಚ್ಚು ಅಂಕಗಳನ್ನು ಪಡೆದುಕೊಂದಿರುವ ಕಾಗವಾಡ ಹಾಗು ಅಥಣಿತಾಲುಕಿನ ನಮ್ಮ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದನ ಜೊತೆಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ.
ಆದ್ದರಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಮಾಜಿ ಅಥಣಿ ಪುರಸಭೆ ಅಧ್ಯಕ್ಷರು ಹಾಲಿ ಸದಸ್ಯರಾದ ರಾವಸಾಬ ಐಹೊಳೆ ತಿಳಿಸಿದ್ದಾರೆ ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಸಚಿವರು ಸಂಸದರು ಶಾಸಕರು,ಉನ್ನತ ದರ್ಜೆ ಅಧಿಕಾರಿಗಳು,ಅಥಣಿ ಪುರಸಭೆ,ಹಾಗೂ ಸಮುದಾಯದ ಬಂದು ಭಾಂದವರು,ಯುವಕರುತಾಯಂದಿರು,ಗುರು ಹಿರಿಯರು,ಸ್ನೇಹಿತರು ಮುಂತಾದವರು ಭಾಗವಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ ಸಿಂದಗಿ ಅಥಣಿ ಮಾದಿಗ ಸಮುದಾಯದ ಮುಖಂಡರಾದ ಹಣಂಂತ ಅರ್ಧವೂರ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ. ಕುಮಾರ ಗಸ್ತಿ. 9108428775
ಹನಮಂತ ಅರ್ದಾವುರ 9900495371 ಆಕಾಶ ಮಾದರ ೮೧೦೫೭೩೩೧೬೪




