ಅಹ್ಮದಾಬಾದ್ : ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ ನಡೆಯಲಿದೆ.
ವಿಜಯ್ ರೂಪಾನಿ ಅವರ ದೇಹದ ಗುರುತನ್ನು ಡಿಎನ್ ಎ ಪರೀಕ್ಷೆ ಮೂಲಕ ಪತ್ತೆಹಚ್ಚಲಾಗಿದ್ದು, ಇದಾದ ಬಳಿಕ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.ಇದೀಗ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನ ಮಾಡಿದ್ದಾರೆ.
ರಾಜ್‌ಕೋಟ್‌ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಲು ನಿರ್ಧರಿಸಲಾಗಿದ್ದು ಜೊತೆಗೆ ರೂಪಾನಿ ಅವರ ಸ್ಮರಣಾರ್ಥ ಒಂದು ದಿನ ಶೋಕಾಚರಣೆಯನ್ನು ನಡೆಸಲು ನಿರ್ಧರಿಸಿದೆ.
ಕಳೆದ ಗುರುವಾರ ಏರ್ ಇಂಡಿಯಾ ದುರಂತ ಸಂಭವಿಸಿತ್ತು. ಸುಮಾರು 270ಮಂದಿ ಪ್ರಾಣಬಿಟ್ಟಿದ್ದರು. ಇದೇ ವಿಮಾನದಲ್ಲಿದ್ದ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸಾವನ್ನಪ್ಪಿದ್ದರು.




