ರಾಮದುರ್ಗ : ತಾಲ್ಲೂಕಿನ ಗೊಣ್ಣಾಗರ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ನಮಗೆ ಕೆಲಸ ನೀಡುತ್ತಿಲ್ಲಾ ಎಂದು ಗೊಣ್ಣಾಗರ ಗ್ರಾಮ ಪಂಚಾಯತಿಯ ಮುಂದೆ ಪ್ರತಿಭಟನೆ ಸಡೆಸಿದರು.
ವರ್ಷಕ್ಕೆ ನೂರು ದಿನ ಕೆಲಸ ಕೊಡಬೇಕೆಂದು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಇಲ್ಲಿನ ಗ್ರಾಮ ಪಂಚಾಯತಿ ಅಧಿಕಾರಿಗಳು ನಮಗೆ ಕೂಲಿ ಕೆಲಸ ಕೊಡದೆ ಅತಾಯಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.
ಆದರೆ ಇಲ್ಲಿನ ಗ್ರಾ.ಪಂ ಅಧಿಕಾರಿಗಳು ಒಂದು ವರ್ಷಕ್ಕೆ ಒಂದು ನೂರು ದಿನ ಕೆಲಸ ಕೊಡಬೇಕೆಂದು ನಿಯಮಗಳಿದ್ದರೂ ಸಹ ಇಲ್ಲಿನ ಅಧಿಕಾರಿಗಳು ಇಪ್ಪತ್ತು ದಿನ ಸಹ ಕೆಲಸ ಕೊಡುತ್ತಿಲ್ಲಾ ಎಂದು ರಾಮದುರ್ಗ ತಾಲೂಕಿನ ಗೊಣ್ಣಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರವು ಹುಲಿಗೊಪ್ಪ ಗ್ರಾಮದ ಕೂಲಿ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.
ನಮ್ಮ ಎನ್.ಎಮ್.ಆರ್ ಗಳನ್ನು ಸಹ ಸರಿಯಾಗಿ ಹಾಕದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ನೂರಾರು ಜನ ಮಹಿಳೆಯರು ಸೇರಿದಂತೆ ಪುರುಷರು ಸಹ ತಾವು ಕೆಲಸಕ್ಕೆ ಉಪಯೋಗಿಸುತ್ತಿದ್ದ ಬುಟ್ಟಿ, ಸಲಕಿ ಹಾಗೂ ಗುದ್ದಲಿಗಳನ್ನು ತೆಗೆದುಕೊಂಡು ಪಂಚಾಯತಿಗೆ ತಂದು ಪ್ರತಿಭಟನೆ ನಡೆಸಿದರು.
ಕೆಲಕಾಲ ಪ್ರತಿಭಟನೆ ನಡೆಸಿದ ಕೂಲಿ ಕಾರ್ಮಿಕರು, ಅಧಿಕಾರಿಗಳು ಬರುವ ವರೆಗೆ ನಮ್ಮ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟುಹಿದರು.
ನಮ್ಮ ಗ್ರಾ ಪಂ ವ್ಯಾಪ್ತಿಯಲ್ಲಿ ಈ ಹಿಂದೆ ಹಾಕಿದ ಕ್ರೀಯಾ ಯೋಜನೆಯ ಕೆಲಸಗಳು ಪೂರ್ಣಗೊಂಡಿವೆ, ಆದ್ದರಿಂದ ಕೆಲಸ ಕೊಡಲು ತೊಂದರೆಯಾಗುತ್ತಿದೆ ಎಂದು ಗೊಣ್ಣಾಗರ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಈರನಗೌಡ ಪಾಟೀಲ ತಿಳಿಸಿದರು.
ರಜೆ ದಿನವು ಗ್ರಾ ಪಂಗೆ ಪ್ರತಿಭಟನೆ ಮಾಡುತ್ತಿರುವ ಸುದ್ದಿ ತಿಳಿದ ತಕ್ಷಣವೇ ಗ್ರಾ ಪಂ ಕಾರ್ಯದರ್ಶಿ ಆದ ಎಚ್.ಬಿ.ಹುಗ್ಗಿ ಎರಡನೇ ಶನಿವಾರ ಗ್ರಾಪಂಗೆ ರಜೆ ಇದ್ದರು ಸಹ ಆಗಮಿಸಿ ತಮ್ಮ ಸಿಬ್ಬಂದಿಗಳನ್ನು ಕರೆಸಿ ಹುಲಿಗೊಪ್ಪ ಗ್ರಾಮದ ಕೂಲಿ ಕಾರ್ಮಿಕರ ಎನ್.ಎಮ್.ಆರ್ ಗಳನ್ನು ಹಾಕ ತೊಡಗಿದರು.
ನಮಗೆ ಜಾಬ್ ಕಾರ್ಡ್ ಕೊಡದೆ ನಾವು ಕೂಲಿ ಕೆಲಸ ಮಾಡುವುದು ಹೇಗೆ ? ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಕೇಳಿದರೆ ಅವರು ಸಿಬ್ಬಂದಿಯ ಮೇಲೆ ಹಾಕಿ ಜಾರಿಕೊಳ್ಳುತ್ತಿದ್ದಾರೆ.
ವರದಿ : ಮಂಜುನಾಥ ಕಲಾದಗಿ




