ಸಿಂಧನೂರು : ಜೂ.16 ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಅನಾಥರಾಗಿ ಬಂದು ಆಶ್ರಯ ಪಡೆದಿದ್ದ ಕನಕ ದುರ್ಗಮ್ಮ ವಯಸ್ಸು 81 ಇವರು ಅನಾರೋಗ್ಯದಿಂದ ಮರಣ ಹೊಂದಿದ ಹಿನ್ನೆಲೆ ಇವರ ನೇತ್ರ ಹಾಗೂ ದೇಹ ಧಾನವನ್ನು ಈ ನ್ಯೂಕ್ಲಿಯೇಷನ್ ಮೂಲಕ ಆಶ್ರಮದಲ್ಲಿಯೇ ನೇತ್ರಗಳನ್ನು ಸ್ವೀಕರಿಸಿದ ನಂತರ ರಾಯಚೂರು ರಿಮ್ಸ್ ಮೆಡಿಕಲ್ ಕಾಲೇಜ್ ಗೆ ನೇತ್ರ ಹಾಗೂ ದೇಹವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರು ತಾಲೂಕ ಸಾರ್ವಜನಿಕ ಆಸ್ಪತ್ರೆ ವೈದ್ಯರಾದ ಡಾ. ನಾಗರಾಜ ಕಾಟ್ವ, ಕಾರುಣ್ಯಶ್ರಮದ ಕಾರ್ಯಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿದ್ದು ಹೀಗೆ ಇರುತ್ತದೆ.
ಈ ವೇಳೆ ರಾಯಚೂರು ರಿಮ್ಸ್ ಮೆಡಿಕಲ್ ಕಾಲೇಜ್ ನೇತ್ರ ವಿಭಾಗದ ವೈದ್ಯಧಿಕಾರಿಗಳಾದ. ಡಾ. ಸೀರಜ್. ಡಾ. ನಿಶಾ. ಡಾ. ಸುಶಾಂತ್. ಸಿಬ್ಬಂದಿಗಳ ಆಕಾಶ್. ಅಂಗಾರಚನ ಶಸ್ತ್ರ ವಿಭಾಗದ ಸಿಬ್ಬಂದಿಗಳಾದ ಸುರೇಶ್. ಮಾತಿನ್. ನಗರ ವೈದಾಧಿಕಾರಿಗಳಾದ ಡಾ. ನಾಗರಾಜ್ ಕಾಟ್ವಾ. ಪೊಲೀಸ್ ಅಧಿಕಾರಿ ಆನಂದ್ ಕುಮಾರ್. ಕಾರುಣ್ಯ ಶ್ರಮದ ಡಾ. ಚನ್ನಬಸವ ಸ್ವಾಮಿ. ಸುಜಾತ ಹಿರೇಮಠ. ಸುಜಾತ ಮಲ್ಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




