Ad imageAd image

ಶೆಡ್ ಮುಂಜುರಾತಿಗೆ ಅರ್ಜಿ ನೀಡಿ ಬೆಸತ್ತ ಜನ : ಗ್ರಾ. ಪಂ. ಯೊಳಗೆ ಎಮ್ಮೆ ಕಟ್ಟಿ ಆಕ್ರೊಶ

Bharath Vaibhav
ಶೆಡ್ ಮುಂಜುರಾತಿಗೆ ಅರ್ಜಿ ನೀಡಿ ಬೆಸತ್ತ ಜನ : ಗ್ರಾ. ಪಂ. ಯೊಳಗೆ ಎಮ್ಮೆ ಕಟ್ಟಿ ಆಕ್ರೊಶ
WhatsApp Group Join Now
Telegram Group Join Now

ಅಥಣಿ : ದನಗಳ ಶೆಡ್ಡು ಕೇಳಿ ಗ್ರಾಮ ಪಂಚಾಯಿತಿಗೆ ಬಂತು ಎಮ್ಮೆ ದನಗಳ ಶೆಡ್ಡು ನಿರ್ಮಾಣಕ್ಕಾಗಿ ಅರ್ಜಿ ನೀಡಿ ಬೆಸತ್ತ ಜನರು ಇಂದು ಗ್ರಾಮ ಪಂಚಾಯಿತಿಗೆ ಎಮ್ಮೆ ತಂದು ಕಟ್ಟುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದಿದ್ದಾರೆ.

ರೈತರು ಹಲವು ಬಾರಿ ದನಗಳ ಶೆಡ್ಡಿಗಾಗಿ ಅರ್ಜಿ ನೀಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗೋಳ್ಳು ಭರವಸೆ ನೀಡಿ ಜಾರಿಕೊಂಡಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಶೆಡ್ಡು ನಿರ್ಮಾಣಕ್ಕಾಗಿ ಜನರು ಗ್ರಾಂ ಪಂಚಾಯ್ತಿಗೆ ಅಲೆದಾಡಿ ಬೇಸತ್ತಿದ್ದಾರೆ, ಈ ಸಮಸ್ಯೆಯ ಬಗ್ಗೆ ಅಭಿವೃದ್ಧಿ ಅಧಿಕಾರಿ ಧರೆಪ್ಪಾ ತಗಲಿ ಇವರನ್ನು ಸಂಪರ್ಕಿಸಲಾಗಿ, ನಾವು ಜನರು ಕೊಟ್ಟ ಅರ್ಜಿಯನ್ನು ತೆಗೆದುಕೊಂಡು ಅನುಮೋದನೆಗೆ ಕಳಿಸಿದ್ದು, ಇಂಜಿನಿಯರ್ ಶಂಕರ ಶಾಸ್ತ್ರಿ ಇದರಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳುವ ಮೂಲಕ ಪಿಡಿಒ ಸಾಹೇಬ್ರು ಜಾರಿಕೊಂಡಿದ್ದಾರೆ.

ವರದಿ : ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!